ಕುದ್ರೋಳಿ: ಬ್ರೈಟ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ

0
382

ಸನ್ಮಾರ್ಗ ವಾರ್ತೆ

ಕುದ್ರೋಳಿ: ಜುಲೈ 7: ಕುದ್ರೋಳಿಯ ಬ್ರೈಟ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಿ.ಎ. ಉಝ್ರಾ ಖೈರುನ್ನಿಸಾ ಅವರು ನೂತನ ವಿದ್ಯಾರ್ಥಿ ನಾಯಕರಿಗೆ ಪದಗ್ರಹಣ ಮಾಡಿಸಿ, ಉತ್ತಮ ನಾಯಕತ್ವ ಹಾಗೂ ಜವಾಬ್ದಾರಿಯುತ ಸೇವೆಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕವಿತಾ ಜಲೇಂದ್ರ ಅವರು ಸ್ವಾಗತಿಸಿ, ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.

ಶಾಲೆಯ ಕಾರ್ಯದರ್ಶಿಗಳಾದ ಯು. ಎನ್. ಹಂಝಾ ಅವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು. ಸಹಾಯಕ ಕಾರ್ಯದರ್ಶಿಗಳಾದ ಮುನವ್ವರ್ ಅಹ್ಮದ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಿಯಾನಾ ತಾಹಿರಾ (SPL) ಹಾಗೂ ಮೊಹಮ್ಮದ್ ರಝೀನ್ (ASPL) ಅವರು ಅಧಿಕಾರ ಸ್ವೀಕರಿಸಿದರು. ನಬಾ ಮತ್ತು ತಂಡದಿಂದ ಪ್ರೇರಣಾದಾಯಕ ಗೀತೆ ಪ್ರಸ್ತುತ ಪಡಿಸಲಾಯಿತು.

ಕಾರ್ಯಕ್ರಮವನ್ನು ಶಿಕ್ಷಕಿ ಅಮೃತಾ ಅವರು ನಿರೂಪಿಸಿದರು. ಶಿಕ್ಷಕಿ ಉಮ್ಮು ಹಬೀಬಾ ಅವರು ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.