ಸನ್ಮಾರ್ಗ ವಾರ್ತೆ
ಕಳೆದ ಫೆಬ್ರವರಿ 28ರಂದು ವಿಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಇರಾನಿನ ಸರ್ವೋಚ್ಚ ನಾಯಕ ಖಾಮ್ನೆಯಿ ಅವರ ದೇಹವನ್ನು 125 ದಿನಗಳವರೆಗೆ ಹೇಗೆ ಸಂರಕ್ಷಿಸಿ ಇಡಲಾಗಿದೆ ಎಂಬ ಕುತೂಹಲ ಸಾರ್ವಜನಿಕವಾಗಿ ಇದೆ. ಸುನ್ನಿ ಇಸ್ಲಾಮಿಕ್ ನ್ಯಾಯಶಾಸ್ತ್ರದ ಪ್ರಕಾರ ದೇಹವನ್ನು ಸಾಧ್ಯವಾದಷ್ಟು ಬೇಗ ಸಮಾಧಿ ಮಾಡಬೇಕು ಎಂದು ಹೇಳಲಾಗುತ್ತದೆ. ಷಿಯಾ ನ್ಯಾಯಶಾಸ್ತ್ರಗಳಲ್ಲಿ ಇದಕ್ಕೆ ವಿನಾಯಿತಿಯನ್ನು ಅನುಮತಿಸುತ್ತದೆ.
ಇಸ್ಲಾಮಿಕ್ ಕಾನೂನು ನಡಿಯಲ್ಲಿ ರಾಸಾಯನಿಕಗಳಿಂದ ಮೃತ ದೇಹ ಸಂರಕ್ಷಣೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಹೊಂದಿರುವ ಶೈತೀಕರಿಸಿದ ಕೋಣೆಗಳಲ್ಲಿ ಮೃತ ದೇಹವನ್ನು ಸಂಗ್ರಹಿಸಿಟ್ಟಿದ್ದರು. ಅಂತ್ಯಕ್ರಿಯೆಗಳ ವಿಶೇಷ ಸಮಿತಿಯ ವಕ್ತಾರ ಇಮಾನ್ ಅತ್ತರ್ ಶೇಡ್ ಅವರ ಹೇಳಿಕೆಯ ಪ್ರಕಾರ.
ಮೃತ ದೇಹವನ್ನು ಎಲ್ಲಿಯೂ ಹೂಳಾಗಿಲ್ಲ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿಲ್ಲ. ಧಾರ್ಮಿಕ ಮಾನದಂಡಗಳಿಗೆ ಅನುಗುಣವಾಗಿ ಶೈತ್ಯೀಕರಿಸಿದ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಜುಲೈ 9 ಶುಕ್ರವಾರದಂದು ಅವರ ಜನ್ಮಸ್ಥಳವಾದ ಮಶಾದಿನಲ್ಲಿ ಸಮಾಧಿ ಮಾಡಲಾಗುವುದು. ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ 10 ಮಿಲಿಯನ್ ಗಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.












