ಪ್ರವಾದಿ ಯೂಸುಫ್(ಅ)ರ ಇತಿಹಾಸದಿಂದ ಸಿಗುವ ಹತ್ತು ಸಂದೇಶಗಳು

0
260

ಸಾಂದರ್ಭಿಕ ಚಿತ್ರ

✍️ ಜಾಸಿಮುಲ್ ಮುತವ್ವ

“ನನಗೊಂದು ಮಗು ಜನಿಸಿತು. ಈ ಬಗ್ಗೆ ನನಗೆ ಯಾವ ಉಪದೇಶಗಳನ್ನು ನೀಡುವಿರಿ?” ಎಂದು ನನ್ನೊಂದಿಗೆ ಕೇಳಿದರು.

ಅದಕ್ಕೆ, “ಪ್ರವಾದಿ ಯಾಕೂಬ್(ಅ) ಮತ್ತು ಅವರ ಮಕ್ಕಳ ಕುರಿತು ನಡೆದ ಘಟನೆಗಳನ್ನು ಆಧಾರವಾಗಿರಿಸಿಕೊಂಡು ನಾನು ಪ್ರವಾದಿ ಯೂಸುಫ್(ಅ) ಹತ್ತು ಸಂದೇಶಗಳನ್ನು ನಿಮಗೆ ವಿವರಿಸಿ ಕೊಡುವೆನು.

1. ಪ್ರವಾದಿ ಯೂಸುಫ್(ಅ)ರಿಗೆ ಹನ್ನೊಂದು ಸಹೋದರರಿದ್ದರು. ಅದರಲ್ಲಿ ಓರ್ವರು ಯೂಸುಫ್(ಅ)ರ ತಾಯಿಯಿಂದಲೇ ಜನಿಸಿದ ನೇರ ಸಹೋದರರಾದರೆ ಇನ್ನುಳಿದ ಹತ್ತು ಮಂದಿ ನಂತರ ಅವರ ಮಲತಾಯಿಯಿಂದ ಹುಟ್ಟಿದವರಾಗಿದ್ದರು. ಅವರೆಲ್ಲರೂ ಫೆಲೆಸ್ತೀನಿನಲ್ಲಿ ವಾಸಿಸುತ್ತಿದ್ದರು. ಅವರ ಜೀವನ ಚರಿತ್ರೆಯನ್ನು ಪವಿತ್ರ ಕುರ್‌ಆನ್ ಒಂದು ಅಧ್ಯಾಯದಲ್ಲಿ ಸಂಪೂರ್ಣವಾಗಿ ವಿವರಿಸಿದೆ. ಮುಂದಿನ ತಲೆಮಾರುಗಳಿಗೆ ಹಲವಾರು ಸಂದೇಶಗಳನ್ನು ಈ ಅಧ್ಯಾಯದ ಮೂಲಕ ಅಲ್ಲಾಹನು ನೀಡಿದ್ದಾನೆ. ಮೊದಲನೇಯದು ತಂದೆ ಮತ್ತು ಮಕ್ಕಳ ಆತ್ಮೀಯ ಸಂಬಂಧವಾಗಿದೆ. ಈ ಕಾರಣದಿಂದಲೇ ಯೂಸುಫ್ ಬಾಲ್ಯದಲ್ಲಿ ಕಂಡ ಕನಸನ್ನು ತನ್ನ ತಂದೆಯ ಜೊತೆ ವಿವರಿಸಿದ್ದು. ಇಂತಹ ಆತ್ಮೀಯ ಸಂಬಂಧವು ಕುಟುಂಬ ಜೀವನವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

2. ಭವಿಷ್ಯದ ಕುರಿತು ತಂದೆಯ ದೂರದೃಷ್ಟಿತ್ವ ಮತ್ತು ನಿಲುವುಗಳು. ಭವಿಷ್ಯದಲ್ಲಿ ಅಲ್ಲಾಹನು ಯೂಸುಫರನ್ನು ವಿಶೇಷ ವಾಗಿ ಆರಿಸಿಕೊಳ್ಳುವನೆಂದು ಮಹತ್ತರವಾದ ಕೆಲವು ಘಟನೆಗಳು ನಡೆಯಲಿರುವುದು ಎಂಬುದನ್ನು ಸೂಚಿಸಲಾಯಿತು. ನಂತರ ಅವೆಲ್ಲವೂ ಜರಗಿತು. ಯೂಸುಫ್‌ರು ಪ್ರವಾದಿಯಾಗಿ, ಮಂತ್ರಿಯಾಗಿ, ಆಡಳಿತಗಾರನಾಗಿ ಉನ್ನತ ಸ್ಥಾನವನ್ನು ತಲುಪಿದರು.

3. ಆ ಸಮಾಜದ ವಾಸ್ತವ ವಿಚಾರಗಳ ಬಗ್ಗೆ ಅವರಿಗೆ ಜ್ಞಾನವಿತ್ತು. ಅದರೊಂದಿಗೆ ಹೇಗೆ ವ್ಯವಹರಿಸಬೇಕೆಂಬ ತಿಳುವಳಿಕೆ ಇತ್ತು. ವಿಶೇಷವಾಗಿ ಕುಟುಂಬದ ಸ್ಥಿತಿಗತಿಗಳ ಅರಿವು. ಮಲ ತಾಯಿಗೆ ಜನಿಸಿದ ಸಹೋದರರ ಮನದಲ್ಲಿ ತಂಬಿಕೊಳ್ಳುತ್ತಿರುವ ಅಸೂಯೆಯ ಬಗ್ಗೆ, ಅಲ್ಲಿ ದ್ವೇಷ ಬೆಳೆಯುತ್ತಿರುವ ಬಗ್ಗೆ ಅವರು ಮಗನಿಗೆ ತಿಳಿಸಿದ್ದರು. ಆದ್ದರಿಂದ ಕನಸಿನ ವೃತ್ತಾಂತವನ್ನು ಅವರ ಬಳಿ ಹೇಳಬಾರದೆಂದು ಯಾಕೂಬರು(ಅ) ಮಗನಿಗೆ ತಾಕೀತು ನೀಡಿದ್ದರು. ಅವರ ಮನದೊಳಗೆ ಶೈತಾ ನನು ನುಸುಳಬಹುದೆಂಬ ಆತಂಕವನ್ನು ಊಹಿಸಿ ಈ ಉಪದೇಶ ನೀಡಿದ್ದರು.

4. ಪರಮ ಶತ್ರುವಾಗಿರುವ ಶೈತಾನನ ಬಗ್ಗೆ ಪ್ರವಾದಿ ಯೂಸುಫರಿಗೆ ಪ್ರವಾದಿ ಯಾಕೂಬರು ಎಚ್ಚರಿಸಿದ್ದರು. ಸಹೋದರರನ್ನು ದ್ವೇಷಿಸುವ ಬದಲು ಶೈತಾನನನ್ನು ಸಂಪೂರ್ಣವಾಗಿ ವಿರೋಧಿಸಲು ಸೂಚಿಸಿದ್ದರು. “ಖಂಡಿತವಾಗಿಯೂ ಶೈತಾನನು ಮನುಷ್ಯನ ಪ್ರತ್ಯಕ್ಷ ಶತ್ರುವಾಗಿದ್ದಾನೆ.” (ಯೂಸುಫ್: 5) ಎಂಬ ಕುರ್‌ಆನ್ ವಚನವು ಇದನ್ನೇ ಸೂಚಿಸುತ್ತದೆ. ಸಹೋದರರಲ್ಲಿ ಶೈತಾನನು ನಿಮ್ಮ ನಿಜವಾದ ಶತ್ರು ಎಂದು ಹೇಳಿ, ಕುಟುಂಬ ಸಂಬAಧವನ್ನು ಒಡೆಯಲು ಸಹೋದರರ ನಡುವೆ ವೈರತ್ವ ನಡೆಸಲು ಮಾಡುವ ಶೈತಾನನ ಕುತಂತ್ರಗಳ ವಿರುದ್ಧ ನೀವು ಎಚ್ಚರವಾಗಿರಬೇಕೆಂದು ಪ್ರವಾದಿ ಯೂಸುಫ್‌ರಿಗೆ ಉಪದೇಶ ನೀಡಲಾಯಿತು.

5. ಕುಟುಂಬದ ಪೂರ್ವಜರ ಪರಂಪರೆಯ ಹೆಸರು ಕೀರ್ತಿ ಮಹತ್ವಗಳು ನಮಗೆ ಅನುಗ್ರಹವಾಗಿವೆ, ಅದನ್ನು ಕಾಪಾಡಬೇಕೆಂದು ಪ್ರವಾದಿ ಯಾಕೂಬರು ಮಗನಿಗೆ ಉಪದೇಶಿಸಿ ದರು. “ನಿನಗೆ ವಿಷಯಗಳ ಅಳಕ್ಕೆ ತಲುಪುದನ್ನು ಕಲಿಸಿಕೊಡುವನು ಮತ್ತು ಇದಕ್ಕೆ ಮುಂಚೆ ನಿನ್ನ ಪೂರ್ವಜರಾಗಿದ್ದ ಇಬ್ರಾಹೀಮ್ ಮತ್ತು ಇಸ್ಹಾಕ್‌ರ ಮೇಲೆ ಅವನು ತನ್ನ ಭವ್ಯ ಕೊಡುಗೆಯನ್ನು ಪೂರ್ಣಗೊಳಿಸಿದಂತೆ.” (ಯೂಸುಫ್: 6)

ತಂದೆಯಂದಿರಿಗೆ ಬೇಕಾದ ಐದು ಪಾಠಗಳನ್ನು ಈ ಮೇಲೆ ನಾವು ಸೂಚಿಸಿದೆವು. ಮಕ್ಕಳು ಮತ್ತು ತಂದೆಯ ಜೊತೆಗಿರುವ ನಿಕಟ ಸಂಬಂಧ, ವಾಸ್ತವ ಪ್ರಜ್ಞೆ, ಬಾಹ್ಯ ಶತ್ರು ಗಳ ವಿರುದ್ಧ ದೃಢವಾಗಿರುವುದು. ಶತ್ರುಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ, ವಂಶ ಪರಂಪರೆಯ ಗೌರವ ಕಾಪಾಡುವುದು ಇವೆಲ್ಲ ಆ ಪಾಠಗಳಾಗಿವೆ. ಮುಂದಿನ ಉಪದೇಶಗಳು ಮಕ್ಕಳಿಗೆ ಸಂಬಂಧಿಸಿದ್ದಾಗಿದೆ.

1. ಮಕ್ಕಳು ಸಮರ್ಥರಾಗಿ, ಹೊಸ ಹೊಸ ಚಿಂತನೆಗಳನ್ನು ಮಾಡುವವರಾಗಿದ್ದಾರೆ. ಹಿರಿಯರು ಏನು ಬಯಸುತ್ತಾರೆ ಎಂಬ ಬಗ್ಗೆ ಅವರಿಗೆ ಅರಿವಿದೆ. ಹಿರಿಯವರೊಂದಿಗೆ ಹೇಗೆ ಮಾತನಾಡಬೇಕೆಂಬ ಬಗ್ಗೆ ಅವರಿಗೆ ಅರಿವಿದೆ. ಯೂಸುಫ್‌ರ ಸಹೋದರರು ತಂದೆಯೊಂದಿಗಿನ ಬಾಂದವ್ಯಕ್ಕೆ ಆಟವನ್ನು ಬಳಸಿಕೊಂಡರು. ಆಟವಾಡಲು ಯೂಸುಫ್‌ರನ್ನು ನಮ್ಮೊಂದಿಗೆ ಕಳುಹಿಸಿಕೊಡಬೇಕೆಂದು ಅವರು ತಂದೆಯೊಡನೆ ಬೇಡಿಕೊಂಡರು. ಯಾವುದೇ ತಂದೆಯು ಮಕ್ಕಳನ್ನು ಆಟವಾಡುವುದರಿಂದ ದೂರ ಸರಿಸಲಾರರು. ತಂದೆಯ ವಾತ್ಸಲ್ಯದ ಮೇಲೆಯೇ ಆ ಸಹೋದರರು ಪ್ರಭಾವ ಬೀರಿ ಯಶಸ್ವಿಯಾದರು.

2. ಹಿರಿಯರ ಮನಗೆಲ್ಲಲು ಮಕ್ಕಳು ಯುಕ್ತಿಯ ವಚನ ಗಳನ್ನು ಬಳಸುತ್ತಾರೆ. ಅವರು ತಮ್ಮ ತಂದೆಯೊಂದಿಗೆ “ನಾವು ಆತನನ್ನು ಚೆನ್ನಾಗಿ ನೊಡಿಕೊಳ್ಳುವೆವೆಂದೂ, ನಾವು ಆತನ ರಕ್ಷಣೆಗೆ ಇದ್ದೇವೆ ಎಂದೂ ಹೇಳಿದ್ದರು (ಯೂಸುಫ್; 12) ತಂದೆಯ ಆತಂಕವನ್ನು ಮೊದಲೇ ಊಹಿಸಿದ ಅವರು ಮಗನ ರಕ್ಷಣೆಯ ಭರವಸೆ ನೀಡಿದರು.

3. ತಂದೆಗೆ ವಿಷಯ ಮನದಟ್ಟು ಮಾಡಿಕೊಡಲು ತಕ್ಕ ಸಮಯ, ಅದನ್ನು ವಿವರಿಸುವ ರೀತಿ ಶೈಲಿ ಯಾವುದೆಂಬುದರ ಪ್ರಜ್ಞೆ ಆ ಸಹೋದರರಲ್ಲಿತ್ತು. ತಂದೆಯನ್ನು ಮೋಸಗೊಳಿಸಲು ಸುಳ್ಳು ಕತೆಯನ್ನು ಹೆಣೆದು ಕತ್ತಲೆಯ ವೇಳೆಯಲ್ಲಿ ಅವರು ಮನೆಗೆ ಪ್ರವೇಶಿಸಿದರು.

4. ತಂದೆ ನಮ್ಮ ಬಗ್ಗೆ ಯಾವ ರೀತಿಯ ಭಾವನೆ ಇಟ್ಟಿರ ಬಹುದು ಎಂಬುದನ್ನು ಅವರು ಮೊದಲೇ ಊಹಿಸಿದ್ದರು. ನಮ್ಮ ಮಾತುಗಳ ಮೇಲೆ

ಅವರು ವಿಶ್ವಾಸವಿಡಲಾರರು ಎಂಬುದನ್ನು ಅರಿತ ಆ ಮಕ್ಕಳು ಹೇಳಿದ್ದನ್ನು ಕುರ್‌ಆನ್ ಹೇಳಿದೆ. “ನಾವು ಸತ್ಯವಂತರಾಗಿದ್ದರೂ ತಾವು ನಮ್ಮ ಮಾತನ್ನು ನಂಬಲಾರಿರಿ.” (ಯೂಸುಫ್: 17)

5. ಕುಟುಂಬದ ಸಮಸ್ಯೆಯು ಒಂದೇ ಬಾರಿಗೆ ಮುಗಿಯದು. ಅದಕ್ಕೆ ಸಮಯ, ಸಹನೆ, ದೇವ ಸಹಾಯ, ಸಮಾಲೋಚನೆ, ಅನುಭವಸ್ಥರ ಉಪದೇಶ ಗಳು ಬೇಕು. ಪ್ರವಾದಿ ಯೂಸುಫರ ಸಹೋದರರು ಉಂಟು ಮಾಡಿದ ಸಮಸ್ಯೆಗಳ ಪರಿಹಾರಕ್ಕೆ ಸಹನೆ ಮತ್ತು ಸೃಷ್ಟಿಕರ್ತನ ಜೊತೆ ಸಹಾಯಕ್ಕಾಗಿ ಯಾಚಿಸುವ ಮಾರ್ಗವನ್ನು ಆಯ್ದುಕೊಂಡರು. ಕುಟುಂಬದವರೆಲ್ಲಾ ಸೇರಿ ಗತ ಸಮಸ್ಯೆಯನ್ನು ಸ್ಮರಿಸಿ ಖೇದಿಸುತ್ತಾ ತಾಳ್ಮೆ ಸಹನೆಯ ಮನೋಭಾವದೊಂದಿಗೆ ಪರಸ್ಪರ ಕ್ಷಮಿಸುತ್ತಾ ಮರೆತು ಬಿಟ್ಟು ಪ್ರೀತಿಯ ವಾತಾವರಣ ಮೂಡಿ ಬರಲು ನಲುವತ್ತು ವರ್ಷಗಳು ತಗಲಿದುವು. ಈ ವೃತ್ತಾಂತವು ಸಹನೆ ಕ್ಷಮಾಯಾಚನೆ, ಕ್ಷಮಾ ಗುಣದ ಸಂದೇಶದೊಂದಿಗೆ ಮುಕ್ತಾಯವಾಗುತ್ತದೆ. ಅಧ್ಯಯನ ನಡೆಸಿದರೆ ಪ್ರವಾದಿ ಯೂಸುಫರ(ಅ) ಬದುಕಿನಲ್ಲಿ ಇನ್ನೂ ಹತ್ತು ಹಲವು ಸಂದೇಶಗಳು ಸಿಗಬಹುದು.