ಕೃತಕ ಹಾಲು ಮಾರಾಟಗಾರರ ಬಂಧನ: ಬೆಚ್ಚಿ ಬೀಳಿಸುವ ಮಾಹಿತಿ

0
318

ಸನ್ಮಾರ್ಗ ವಾರ್ತೆ

ಮಹಾರಾಷ್ಟ್ರದ ಧರ್ಮಶಾಲಾ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ನಕಲು ಹಾಲು ಮಾಫಿಯಾ ನಡೆಯುತ್ತಿರುವುದು ಪತ್ತೆಯಾಗಿದೆ. ಪೊಲೀಸರು ಮತ್ತು ಆಹಾರ ಇಲಾಖೆಯು ನಡೆಸಿದ ಜಂಟಿ ತನಿಖೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಾಲು ಉತ್ಪಾದನೆ ಮತ್ತು ವಿತರಣೆ ಪತ್ತೆಯಾಗಿದೆ.

ಅಧಿಕಾರಿಗಳ ಪ್ರಕಾರ ಕಳೆದ ಆರು ತಿಂಗಳಲ್ಲಿ ಸುಮಾರು 2,30470 ಕಿಲೋ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಕಲಬೆರಕೆಗಾಗಿ ಬಳಸಲಾಗಿದೆ. ಈ ಹಾಲಿನ ಪುಡಿಯನ್ನು ಬಳಸಿ ಈಗಾಗಲೇ 23 04070 ಲೀಟರ್ ಕೃತಕ ಹಾಲು ಉತ್ಪಾದಿಸಲಾಗಿದೆ. ಪ್ರತಿ 100 ಲೀಟರ್ ಶುದ್ದ ಹಾಲಿಗೆ 10 ಲೀಟರ್ ಕೃತಕ ಹಾಲನ್ನು ಈ ಗ್ಯಾಂಗ್ ಸೇರಿಸುತ್ತಿತ್ತು.

ಹಾಲನ್ನು ನಿಜವಾದ ಹಾಲಾಗಿ ಕಾಣುವಂತೆ ಮಾಡಲು ಮತ್ತು ಕೊಬ್ಬಿನಂಶವನ್ನು ಕೃತಕವಾಗಿ ಹೆಚ್ಚಿಸಲು ಅವರು ಡಿಟರ್ಜೆಂಟ್ ಪೌಡರ್ ಪಾಮ್ ಎಣ್ಣೆ ಮತ್ತು ಗುಣಮಟ್ಟವಿಲ್ಲದ ರಾಸಾಯನಿಕಗಳನ್ನು ಬಳಸುತ್ತಿದ್ದರು.

ಈ ಹಾಲು ಆರೋಗ್ಯಕ್ಕೆ ಬಹಳ ಗಂಭೀರ ಅಪಾಯವನ್ನು ಉಂಟುಮಾಡಬಲ್ಲದು. ಇದನ್ನು ನಿರಂತರ ಸೇವಿಸುವುದರಿಂದ ಯಕೃತ್ತು ಮೂತ್ರಪಿಂಡಗಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಸಂಪೂರ್ಣ ಹಾನಿಗೊಳಗಾಗಬಹುದು. ಇದು ಮಕ್ಕಳು ಮತ್ತು ಗರ್ಭಿಣಿಯರು ಹಾಗೂ ವೃದ್ಧರಿಗೆ ಅತ್ಯಂತ ಅಪಾಯಕಾರಿ .

ಈ ಘಟನೆಯಲ್ಲಿ ಏಳು ಜನರ ವಿರುದ್ಧ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ.