ಅಮೆರಿಕಾದಲ್ಲಿ ಲಿಜಿಯೋ ನೈರ್ಸ್ ಕಾಯಿಲೆ: ನಾಲ್ಕು ಸಾವು

0
261

ಸನ್ಮಾರ್ಗ ವಾರ್ತೆ

ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಲಿಜಿಯೋ ನೈರ್ಸ್ ಕಾಯಿಲೆ ತೀವ್ರವಾಗಿ ಹರಡುತ್ತಿದೆ. ಈಗಾಗಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಕಾಯಿಲೆ ಲೀಜಿಯೋ ನೆಲ್ಲ ಬ್ಯಾಕ್ಟೀರಿಯಾದಿಂದ ಹರಡುತ್ತದೆ ಮತ್ತು ಗಂಭೀರ ಶ್ವಾಸಕೋಶದ ಸೋಂಕು ನೆಗಡಿ ಅಥವಾ ಜ್ವರಕ್ಕೆ ಕಾರಣವಾಗುವ ವೈರಸ್ ಗಳಿಗಿಂತ ಭಿನ್ನವಾಗಿ ಈ ರೋಗವು ಬೆಚ್ಚಗಿನ ನೀರಿನಲ್ಲಿ ಬೆಳೆಯುವ ಬ್ಯಾಕ್ಟೀರಿಯಗಳಿಂದ ಉಂಟಾಗುತ್ತದೆ.

ಈ ಬ್ಯಾಕ್ಟೀರಿಯಗಳು ದೊಡ್ಡ ಕಟ್ಟಡಗಳಲ್ಲಿನ ಗೋಪುರಗಳು ಕೇಂದ್ರೀಕೃತ ಹವಾನಿಯಂತ್ರಣ ಘಟಕಗಳು ಬಿಸಿನೀರಿನ ತೊಟ್ಟಿಗಳು ಮತ್ತು ಅಲಂಕಾರಿಕ ನೀರಿನ ಕಾರಂಜಿಗಳಲ್ಲಿ ವೇಗವಾಗಿ ಬೆಳೆಯುತ್ತವೆ.

ಆದರೆ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ. ನೀರಿನ ಆವಿ ಅಥವಾ ಲೆಜಿಯೋ ನೆಲ್ಲ ಬ್ಯಾಕ್ಟೀರಿಯಾ ವನ್ನು ಹೊಂದಿರುವ ಸಣ್ಣ ನೀರಿನ ಹನಿಗಳನ್ನು ಉಸಿರಾಡುವುದರಿಂದ ಸೋಂಕಿಗೆ ಒಳಗಾಗುತ್ತಾರೆ. ಸೋಂಕಿತ ಪ್ರದೇಶಗಳಲ್ಲಿ ಕುಡಿಯುವ ನೀರು ಅಥವಾ ಸ್ನಾನದ ಮೂಲಕ ಈ ರೋಗ ಹರಡುವುದಿಲ್ಲ.

ಈ ಬ್ಯಾಕ್ಟೀರಿಯ ದೇಹವನ್ನು ಪ್ರವೇಶಿಸಿದ ಎರಡರಿಂದ 14 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ತೀವ್ರ ಜ್ವರ ಶೀತ ನಿರಂತರ ಕೆಮ್ಮು ಉಸಿರಾಟದ ತೊಂದರೆ ಎದೆ ನೋವು ತೀವ್ರ ಸ್ನಾಯು ನೋವು , ದೈಹಿಕ ನೋವು ತೀವ್ರ ತಲೆನೋವು ಆಯಾಸ ವಾಂತಿ ವಾಕರಿಕೆ ಇತ್ಯಾದಿಗಳು ಈ ಕಾಯಿಲೆಯ ಲಕ್ಷಣಗಳಾಗಿವೆ.

ಈ ಕಾಯಿಲೆಯ ವಿರುದ್ಧ ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ. ಕಟ್ಟಡದ ನೀರಿನ ಟ್ಯಾಂಕುಗಳಲ್ಲಿ ದೀರ್ಘಕಾಲದ ವರೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಕೂಲಿಂಗ್ ಟವರ್ ಗಳು ದೊಡ್ಡ ಪ್ಲಂಬಿಂಗ್ ವ್ಯವಸ್ಥೆಗಳು ಬಿಸಿ ನೀರಿನ ತೊಟ್ಟಿಗಳು ಮತ್ತು ಶವರ್ಗಳನ್ನು ನಿಯಮಿತವಾಗಿ ಸೋಂಕುರಹಿತಗೊಳಿಸಬೇಕು ಎಂದು ತಿಳಿಸಲಾಗಿದೆ.