ಶ್ರೀಮಂತ್ ಪಾಟಿಲ್ ದಾಖಲಾದ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರೇ ಇಲ್ಲ, ನಮ್ಮನ್ನು ಭೇಟಿಯಾಗಲು ಬಿಡಲಿಲ್ಲ- ಮಹಾರಾಷ್ಟ್ರ ಶಾಸಕಿ ಯಶೋಮತಿ ಠಾಕೂರ್

0
739

ಮುಂಬೈ, ಜು. 20: ಮುಂಬೈಯ ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಶಾಸಕ ಶ್ರೀಮಂತ್ ಪಾಟೀಲರನ್ನು ಇರಿಸಲಾಗಿದೆ. ಅವರನ್ನು ಭೇಟಿಯಾಗಲು ಅವಕಾಶ ನೀಡದೆ ಪೊಲೀಸರು ತಡೆದಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಯಶೋಮತಿ ಠಾಕೂರ್ ಹೇಳಿದರು.

ಅವರಿಗೆ ಹೃದ್ರೋಗ ಇದೆ ಎನ್ನಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿಕೊಂಡು ಬರಲು ತೆರಳಿದಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ಮಹಾರಾಷ್ಟ್ರ ಸರಕಾರ ಆಸ್ಪತ್ರೆಗೆ ಕಾವಲು ಹಾಕಿದೆ. ಇದರಿಂದ ಕರ್ನಾಟಕದ ಸರಕಾರವನ್ನು ಕೆಡವಲು ಈ ಎಲ್ಲ ನಾಟಕ ಆಡುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ ಎಂದು ಶಾಸಕಿ ಹೇಳಿದರು.