ಅವರೆಲ್ಲ ಬಂದೇ ಬರುತ್ತಾರೆ, ಸೋಮವಾರವೇ ವಿಶ್ವಾಸಮತ ಯಾಚನೆ: ಕೆಪಿಸಿಸಿ ಅಧ್ಯಕ್ಷ ಈಶ್ವರ್ ಖಂಡ್ರೆ

0
592

ಬೆಂಗಳೂರು,ಜು. 20: ಅತೃಪ್ತ ಶಾಸಕರಿಂದಾಗಿ ಸರಕಾರ ಇಕ್ಕಟ್ಟಿಗೆ ಸಿಕ್ಕಿದೆ. ಅವರೆಲ್ಲ ಮರಳಿ ಬರುವ ವಿಶ್ವಾಸ ನಮಗಿದೆ. ಸೋಮವಾರವೇ ವಿಶ್ವಾಸ ಮತ ಯಾಚನೆ ಮಾಡಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸೋಮವಾರವೂ ವಿಶ್ವಾಸ ಮತಯಾಚನೆ ಆಗುವ ಸಾಧ್ಯತೆ ಸಂದೇಹಾಸ್ಪದ ಎಂದು ಪತ್ರಕರ್ತರೊಂದಿಗೆ ಮಾತಾಡುತ್ತಾ ಹೇಳಿದ್ದಾರೆ. ರಾಮಲಿಂಗ ರೆಡ್ಡಿ ನಮಗೆ ಮೋಸ ಮಾಡಿದ್ದಾರೆ. ಏನೇ ಆದರೂ ವಿಶ್ವಾಸ ಮತಯಾಚನೆಗೆ ಬರುವುದಿಲ್ಲ. ಕುಮಾರಸ್ವಾಮಿ ಸರಕಾರ ಪತನ ಖಚಿತ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದರು.