ಹೊಸದಿಲ್ಲಿ, ಜು. 20: ಉತ್ತರಪ್ರದೇಶದ ಮುಝಫ್ಫರ್ ನಗರದಲ್ಲಿ 2013ರಲ್ಲಿ ನಡೆದ ಗಲಭೆಯ 41 ಪ್ರಕರಣಗಳಲ್ಲಿ 40 ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ. ಕೊಲೆ, ಸಾಮೂಹಿಕ ಅತ್ಯಾಚಾರ, ಗಲಭೆ ಸೃಷ್ಟಿ ಇತ್ಯಾದಿ ಜಾಟ್ ವಿಭಾಗಕ್ಕೆ ಸೇರಿದವರ ವಿರುದ್ಧ ಇದ್ದ 40 ಪ್ರಕರಣಗಳಲ್ಲಿ ಸಾಕ್ಷಿಗಳು ತಿರುಗಿಬಿದ್ದಿದ್ದಾರೆ ಮತ್ತು ಸಾಕ್ಷ್ಯಗಳಿಲ್ಲ ಎಂದು ಬೆಟ್ಟು ಮಾಡಿ ಕಳೆದ ಎರಡು ವರ್ಷಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಜಾಟ್ ವಿಭಾಗ ಮತ್ತು ಮುಸ್ಲಿಮರ ನಡುವೆ ನಡೆದ ಗಲಭೆಯಲ್ಲಿ 65 ಮಂದಿ ಕೊಲೆಯಾಗಿದ್ದು 50 ಸಾವಿರದಷ್ಟು ಜನರು ನಿರಾಶ್ರಿತರಾಗಿದ್ದಾರೆ.
ಮುಝಪ್ಫರ್ ನಗರ್ ಕವಾಲ್ ಗ್ರಾಮದಲ್ಲಿ ಜಾಟ್ ವಿಭಾಗಕ್ಕೆ ಸೇರಿದ ಗೌರವ್, ಸಚಿನ್ ಕೊಲೆಯಾದ ಘಟನೆಯಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಪ್ರಕರಣದಲ್ಲಿ ಮುಝಮ್ಮಿಲ್, ಮುಜಸಿಂ, ಫುಖಾನ್, ನದೀಮ್, ಜಹಾಂಗೀರ್, ಅಫ್ಝಲ್, ಇಕ್ಬಾಲ್ರಿಗೆ ಕೋರ್ಟು ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾಕ್ಷಿಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ. ಆದರೆ ಅವರು ವಿರುದ್ಧ ಸಾಕ್ಷ್ಯ ಹೇಳಿದ್ದರಿಂದ ಕೋರ್ಟು ಆರೋಪಿಗಳನ್ನು ಕೋರ್ಟು ಬಿಡುಗಡೆಗೊಳಿಸಿತು ಎಂದು ಪ್ರಾಸಿಕ್ಯೂಶನ್ ಹೇಳಿದೆ. ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಪ್ರಾಸಿಕ್ಯೂಶನ್ ತಿಳಿಸಿದೆ. ಆದರೆ ಪೊಲೀಸರು ಬಿಳಿ ಕಾಗದಲ್ಲಿ ನಮ್ಮಿಂದ ಬಲವಂತಪಡಿಸಿ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಾಕ್ಷಿಗಳು ಆರೋಪಿಸಿದ್ದು, ಪ್ರಕರಣದಲ್ಲಿಆಯುಧಗಳು ಸಹಿತ ಯಾವುದೇ ಪುರಾವೆಗಳನ್ನು ಪೊಲೀಸರು ಕೋರ್ಟಿಗೆ ಹಾಜರುಪಡಿಸಿರಲಿಲ್ಲ. ಸಾಕ್ಷಿಗಳು ಹೇಳಿಕೆ ಬದಲಾಯಿಸಲು ಕಾರಣವೇನೆಂದು ಪೊಲೀಸರನ್ನು ಒಮ್ಮೆಯೂ ಪ್ರಾಸಿಕ್ಯೂಶನ್ ವಾದಕ್ಕೆ ಕರೆದಿಲ್ಲ. 40 ಪ್ರಕರಣಗಳಲ್ಲಿ 26 ಪ್ರಕರಣ ಗಲಭೆ ಸೃಷ್ಟಿ, 10 ಕೊಲೆ, ನಾಲ್ಕು ಅತ್ಯಾಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಉತ್ತರಪ್ರದೇಶ ಸರಕಾರದ ಸಚಿವ ಸುರೇಶ್ ರಾಣ, ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ಬಿಜೆಪಿ ಶಾಸಕ ಸಂಗೀತ್ ಸೋಮ್, ಹಿರಿಯ ಬಿಜೆಪಿ ನಾಯಕ ಉಮೇಶ್ ಮಾಲಿಕ್ ವಿರುದ್ಧ ಪ್ರಕರಣವನ್ನು ಹಿಂಪಡೆದುಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪತ್ರ ಬರೆದದ್ದು ಈ ಹಿಂದೆ ವಿವಾದಕ್ಕೆ ಕಾರಣವಾಗಿತ್ತು.












