ವಾರಣಾಸಿಯ ಚುನಾವಣೆ ರದ್ದು ಅರ್ಜಿ: ಪ್ರಧಾನಿ ಮೋದಿಗೆ ಕೋರ್ಟು ನೋಟಿಸ್

0
705

ಅಲಾಹಾಬಾದ್, ಜು. 20: ವಾರಣಾಸಿಯ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಲ್ಲಿಸಲಾದ ಅರ್ಜಿಯಲ್ಲಿ ಅಲಹಾಬಾದ್ ಹೈಕೋರ್ಟು ನೋಟಿಸು ಜಾರಿಗೊಳಿಸಿದೆ.

ಚುನಾವಣೆಯಲ್ಲಿ ಮೋದಿ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಸಮಾಜವಾದಿ ಪಾರ್ಟಿ ಅಭ್ಯರ್ಥಿ ತೇಜ್‍ಬಹಾದೂರ್ ಯಾದವ್ ಚುನಾವಣಾ ಫಲಿತಾಂಶದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳು ತೇಜ್‍ಬಹಾದೂರ್ ರ ನಾಮಪತ್ರವನ್ನು ಅಸಿಂಧುಗೊಳಿಸಿದ್ದನ್ನು ಅವರು ಪ್ರಶ್ನಿಸಿದ್ದಾರೆ. ಪ್ರಕರಣವನ್ನು ಆಗಸ್ಟ್ 21ಕ್ಕೆ ಮುಂದೂಡಲಾಗಿದೆ.

ಮೋದಿ ನಾಮಪತ್ರದಲ್ಲಿ ಕುಟುಂಬ ಸದಸ್ಯರ ಕುರಿತು ಮಾಹಿತಿ ನೀಡಿಲ್ಲ ಎಂದು ತೇಜ್‍ ಬಹಾದೂರ್ ಆರೋಪಿಸಿದ್ದರು. ಮೋದಿಯ ಸೂಚನೆ ಪ್ರಕಾರ ತನ್ನ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು ಎಂದು ತೇಜ್‍ ಬಹಾದೂರ್ ಅರ್ಜಿಯಲ್ಲಿ ಸೂಚಿಸಿದ್ದಾರೆ. ನಾಮಪತ್ರ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ತೇಜ್‍ ಬಹಾದೂರ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಚುನಾವಣಾ ಆಯೋಗದ ವಿರುದ್ಧ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿತ್ತು.