ಹೊಸದಿಲ್ಲಿ, ಜು. 20: ತಪ್ಪು ಮಾಡಿಲ್ಲ, ಆದ್ದರಿಂದ ಜಾಮೀನು ಪ್ರಕ್ರಿಯೆಗಳಿಗೆ ತಯಾರಿಲ್ಲ. ನಿಶ್ಶರ್ತವಾಗಿ ಉತ್ತರಪ್ರದೇಶ ಪೊಲೀಸರು ಬಿಡುಗಡೆಗೊಳಿಸಬೇಕೆಂದು ಬಂಧನಕ್ಕೊಳಗಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಹೇಳಿದರು.
ಸೊನ್ಭದ್ರ ಗುಂಡು ಹಾರಾಟದಲ್ಲಿ ಕೊಲೆಯಾದವರ ಕುಟುಂಬ ಸದಸ್ಯರು ಸಂದರ್ಶಿಸಲು ಹೋಗಿದ್ದ ಪ್ರಿಯಾಂಕ ಗಾಂಧಿಯವರನ್ನು ದಾರಿ ಮಧ್ಯದಲ್ಲಿ ಉತ್ತರಪ್ರದೇಶ ಪೊಲೀಸರು ತಡೆದು ನಿಲ್ಲಿಸಿದ್ದರು. ನಂತರ ಅವರನ್ನು ಬಂಧಿಸಿ ಚುನಾರ್ ಗೆಸ್ಟ್ ಹೌಸಿಗೆ ಕರೆತರಲಾಗಿತ್ತು. ಆದರೆ, ಕೊಲೆಯಾದವರ ಕುಟುಂಬ ಸದಸ್ಯರು ಗೆಸ್ಟ್ ಹೌಸ್ಗೆ ಬಂದು ಪ್ರಿಯಾಂಕಾರನ್ನು ಭೇಟಿಯಾಗಿದ್ದರು. ತನ್ನನ್ನು ನಡೆಸಿಕೊಂಡ ರೀತಿಯನ್ನು ಪ್ರಶ್ನಿಸಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.
ತಾನು ಸೋನ್ಭದ್ರ ಗುಂಡು ಹಾರಾಟದಲ್ಲಿ ಬಲಿಯಾದವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದು ಬಂದ ಉದ್ದೇಶ ಈಡೇರಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು. ನಾನೀಗ ಬಂಧನದಲ್ಲಿದ್ದೇನೆ. ಸರಕಾರ ಏನು ಹೇಳುತ್ತದೆ ಎಂದು ನೋಡೋಣ. ಕೊಲೆಯಾದವರ ಕುಟುಂಬಕ್ಕೆ ಕಾಂಗ್ರೆಸ್ ತಲಾ 10 ಲಕ್ಷ ರೂಪಾಯಿ ನೀಡಲಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.












