ಲಕ್ನೊ, ಜು. 20: ಸೋನ್ ಭದ್ರದಲ್ಲಿ ಕೊಲೆಯಾದವರ ಕುಟುಂಬವನ್ನು ಭೇಟಿಯಾಗದೆ ತಾನು ಮರಳಿ ಹೋಗುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಶುಕ್ರವಾರ ರಾತ್ರೆ ಮಿರ್ಝಾಪುರದ ಸರಕಾರದ ಅತಿಥಿ ಗೃಹದಲ್ಲಿ ಕಾರ್ಯಕರ್ತರ ಜೊತೆ ಉಳಿದುಕೊಂಡಿರುವ ಪ್ರಿಯಾಂಕಾ ಗಾಂದಿಯವರೊಡನೆ ಉತ್ತರಪ್ರದೇಶದ ಉನ್ನತ ಅಧಿಕಾರಿಗಳು ಚರ್ಚಿಸಿದರೂ ಅವರು ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ.
ಪ್ರಿಯಾಂಕಾ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪರಸ್ಪರ ಚರ್ಚಿಸುತ್ತಿರುವ ದೃಶ್ಯಗಳು ಬಹಿರಂಗವಾಗಿದೆ. ಬೆಳಗ್ಗೆ ಒಂದು ಗಂಟೆಯ ವೇಳೆಗೆ ಚರ್ಚೆ ನಡೆದಿತ್ತು. ಪ್ರಿಯಾಂಕಾ ಪಾರ್ಟಿ ಕಾರ್ಯಕರ್ತರು ವಾಸಿಸುವ ಗೆಸ್ಟ್ ಹೌಸ್ನಲ್ಲಿ ವಿದ್ಯುತ್ ಇಲ್ಲ ಎನ್ನುವುದು ವೀಡಿಯೊ ದೃಶ್ಯಗಳಿಂದ ದೃಢವಾಗಿದೆ.
ಉತ್ತರಪ್ರದೇಶ ಸರಕಾರದ ಎಡಿಜಿ ಭೂಷಣ್, ವಾರಣಾಸಿ ಪೊಲೀಸ್ ಕಮಿಶನರ್ ಅಗರ್ವಾಲ್ರನ್ನು ಚರ್ಚೆಗೆ ಕಳುಹಿಸಲಾಗಿತ್ತು. ಕೊಲ್ಲಲ್ಪಟ್ಟವರ ಕುಟುಂಬದವರನ್ನು ಭೇಟಿಯಾಗಬಾರದೆಂದು ಅವರನ್ನು ಆಗ್ರಹಿಸಲಾಗಿದೆ. ಆದರೆ ಇದು ಯಾಕೆ ಎನ್ನುವ ಕಾರಣವನ್ನು ಸ್ಪಷ್ಟಪಡಿಸಲಾಗಿಲ್ಲ. ತನ್ನ ಬಂಧನ ಕಾನೂನು ವಿರೋಧಿ ಮತ್ತು ಸ್ಷಷ್ಟ ದಾಖಲೆಗಳನ್ನು ಕೊಟ್ಟಿಲ್ಲ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದ ಸೋನಾಭದ್ರ ಗ್ರಾಮದಲ್ಲಿ ನಡೆದ ಗುಂಡು ಹಾರಾಟದಲ್ಲಿ ಕೊಲೆಯಾದವರ ಕುಟುಂಬವನ್ನು ಸಂದರ್ಶಿಸಲು ತೆರಳಿದ ಪ್ರಿಯಾಂಕಾರನ್ನು ಪೊಲೀಸರು ತಡೆದಿದ್ದರು. ಇದನ್ನು ಪ್ರತಿಭಟಿಸಿ ಪ್ರಿಯಾಂಕಾ ಧರಣಿ ಕುಳಿತಾಗ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ್ದರು.












