ಹೊಸದಿಲ್ಲಿ, ಜು. 22: ಬಾಂಗ್ಲಾದೇಶದ ಬರಹಗಾರ್ತಿ ತಸ್ಲಿಮಾ ನಸ್ರೀನ್ರಿಗೆ ಭಾರತದಲ್ಲಿ ವಾಸಿಸಲು ಒಂದು ವರ್ಷವನ್ನು ಹೆಚ್ಚಿಸಲಾಗಿದೆ. 2004ರಿಂದ ತಸ್ಲಿಮಾ ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನು ಅವರು ಭಾರತದಲ್ಲಿ 2020ರವರೆಗೆ ಉಳಿದುಕೊಳ್ಳಲು ಅವಕಾಶ ದೊರಕಿದಂತಾಯಿತು.
ಸ್ವೀಡಿಷ್ ಪೌರತ್ವ ಹೊಂದಿರುವ ತಸ್ಲೀಮಾ ಕಳೆದವಾರ ಮೂರು ತಿಂಗಳ ಅನುಮತಿ ನೀಡಲಾಗಿತ್ತು. ಇದನ್ನು ಒಂದು ವರ್ಷಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಗೃಹ ಸಚಿವ ಅಮಿತ್ ಶಾ ಟ್ವಿಟರ್ನಲ್ಲಿ ತಸ್ಲೀಮಾ ಪೋಸ್ಟ್ ಹಾಕಿದ್ದರು. ನಂತರ ತಸ್ಲಿಮಾರಿಗೆ ಒಂದು ವರ್ಷ ವಾಸ್ತವ್ಯ ಅನುಮತಿಯನ್ನು ಹೆಚ್ಚಿಸಲಾಗಿದೆ.
ಮುಸ್ಲಿಂ ಸಂಘಟನೆಗಳು ಕೊಲೆ ಬೆದರಿಕೆ ಹಾಕಿದ ನಂತರ 1994ರಿಂದ ತನ್ನ ಸ್ವದೇಶ ಬಾಂಗ್ಲಾದೇಶವನ್ನು ತಸ್ಲಿಮಾ ತೊರೆದಿದ್ದರು.












