ಮುಝಪ್ಫರ್ ನಗರ್ ಗಲಭೆ ಆರೋಪಿಗಳ ಖುಲಾಸೆ, ಮೇಲ್ಮನವ ಸಲ್ಲಿಸಲು ಜಮಾಅತೆ ಇಸ್ಲಾಮೀ ಹಿಂದ್ ಒತ್ತಾಯ

0
1047

ಹೊಸದಿಲ್ಲಿ, ಜು. 22: ಉತ್ತರಪ್ರದೇಶದ ಮುಝಪ್ಫರ್ ನಗರ ಗಲಭೆಯ 41 ಪ್ರಕರಣಗಳಲ್ಲಿ 40ಕ್ಕೂ ಹೆಚ್ಚು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಯಲ್ಲಿ ಖುಲಾಸೆಗೊಳಿಸಿದ ತೀರ್ಪಿನ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹಿಸಿದೆ. ಸಾಕ್ಷಿಗಳ ಕ್ರಾಸ್ ವಿಚಾರಣೆ ಕೂಡ ನಡೆದಿಲ್ಲ. ಆದರೂ ಆರೋಪಿಗಳನ್ನು ಖುಲಾಸೆಗೊಳಿಸಿದ್ದು ಆತಂಕ ಸೃಷ್ಟಿಸಿದೆ. ಆದ್ದರಿಂದ ಈ ತೀರ್ಪನ್ನು ಉತ್ತರಪ್ರದೇಶ ಸರಕಾರ ಕೋರ್ಟಿನಲ್ಲಿ ಪ್ರಶ್ನಿಸಬೇಕೆಂದು ಜಮಾಅತೆ ಇಸ್ಲಾಮೀ ಒತ್ತಾಯಿಸಿದೆ.

ಗಲಭೆಯಲ್ಲಿ ಅರುವತ್ತಕ್ಕೂ ಹೆಚ್ಚು ಕೊಲೆ ನಡೆದಿದೆ. ಇವರಿಗೆ ನ್ಯಾಯ ದೃಢಪಡಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯಿದ್ ಸಅದತುಲ್ಲ ಹುಸೈನಿ ಹೇಳಿದ್ದಾರೆ.

ಸರಕಾರದ ಈ ಮನೋಭಾವ ಬಲಿಪಶುಗಳ ಕುಟುಂಬಗಳಿಗೆ ಉತ್ತಮ ಸಂದೇಶ ನೀಡುವುದಿಲ್ಲ. ಉತ್ತರಪ್ರದೇಶ ಸರಕಾರ ತನ್ನ ಹೊಣೆಯನ್ನು ನಿರ್ವಹಿಸದಿದ್ದರೆ ನ್ಯಾಯದಲ್ಲಿ ವಿಶ್ವಾಸ ಇಟ್ಟಿರುವ ಎಲ್ಲರ ಸಹಾಯ ಪಡೆದು ಕಾನೂನು ಸಹಾಯ ನೀಡಲು ಜಮಾಅತೆ ಇಸ್ಲಾಮೀ ಮುಂದೆ ಬರಲಿದೆ ಎಂದು ಸಅದುತುಲ್ಲ ಹುಸೈನಿ ಹೇಳಿದರು.