ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದು ಮಂದಿರ ಲೂಟಿ ಮಾಡಲು ನಾಚಿಕೆಯಾಗಲ್ವೆ? ಠಾಕ್ರೆ

0
422

ಸನ್ಮಾರ್ಗ ವಾರ್ತೆ

ಶಿವಾಜಿ ಮಹಾರಾಜರು ತೋರ್ನಾ ಕೋಟೆಯನ್ನು ವಶಪಡಿಸಿಕೊಂಡಾಗ ಅವರಿಗೆ ಕೇವಲ 15 ವರ್ಷ ಆ ಸಮಯದಲ್ಲಿ ಅವರ ವಯಸ್ಸನ್ನು ಜೆನ್ ಝಿ ಪೀಳಿಗೆಗೆ ಹೋಲಿಸಬಹುದು ಎಂದು ಶಿವಸೇನೆಯ ಅಧ್ಯಕ್ಷ ಉದ್ದವ್ ಠಾಕ್ರೆ ಹೇಳಿದ್ದಾರೆ.. ಆ ಕಾಲದ ಮೊಘಲ್ ಆಡಳಿತಗಾರರು ಶಿವಾಜಿಯನ್ನು ಇಲಿ ಎಂದು ಕರೆದು ಅವಮಾನಿಸಿದಂತೆ ಈಗಿನ ಆಡಳಿತಗಾರರು ಯುವ ಪೀಳಿಗೆಯನ್ನು ಜಿರಳೆಗಳು ಎಂದು ಕರೆಯುತ್ತಿದ್ದಾರೆ ಎಂದವರು ಹೇಳಿದ್ದಾರೆ.

ಜಿರಳೆಗಳು ಎಂದು ಅವಮಾನಿಸಲ್ಪಡುವವರು 13, 14 ರಿಂದ 27, 28 ವರ್ಷ ವಯಸ್ಸಿನವರು. ಅವರನ್ನು ನಾವು ಜೆನ್ ಝಿ ಎಂದು ಕರೆಯುತ್ತೇವೆ. ಛತ್ರಪತಿ ಶಿವಾಜಿ ಮಹಾರಾಜರು 17ನೇ ವಯಸ್ಸಿನಲ್ಲಿ ತೋರಣಕೋಟೆಯನ್ನು ವಶಪಡಿಸಿಕೊಂಡಾಗ ಅದೇ ವಯಸ್ಸಿನವರಾಗಿದ್ದರು. ಆ ಸಮಯದಲ್ಲಿ ಮೊಘಲರು ಅವರನ್ನು ಇಲಿ ಎಂದು ಕರೆಯುತ್ತಿದ್ದರು ನನ್ನ ತಂದೆ ಇಂದು ಬದುಕಿದ್ದರೆ ಈಗಿನ ಕೇಂದ್ರ ಸರಕಾರ ಅವರನ್ನು ಹಿಂದೂ ವಿರೋಧಿ ಎಂದು ಕರೆಯುತ್ತಿತ್ತು ಎಂದವರು ಹೇಳಿದ್ದಾರೆ.

ಠಾಕರೆ ಕುಟುಂಬದ ಬಗ್ಗೆ ಪುಸ್ತಕ ಪ್ರಕಟಿಸಲು ಧೈರ್ಯ ಬೇಕು. ಯಾವ ರಾಮನ ಹೆಸರಿನಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೀರಿ. ಆ ರಾಮನ ದೇವಾಲಯವನ್ನು ಲೂಟಿ ಮಾಡಲು ನಿಮಗೆ ನಾಚಿಕೆಯಾಗುವುದಿಲ್ವೇ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.