ಕೇಸರಿ ಉಡುಪು ಧರಿಸಿ ರಾಮಮಂದಿರ ದೇಣಿಗೆ ಕಳ್ಳತನ ಪ್ರಾತ್ಯಕ್ಷಿಕೆ ಮಾಡಿದ ಸಂಸದ

0
425

ಸನ್ಮಾರ್ಗ ವಾರ್ತೆ

ಅಯೋಧ್ಯೆ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ವಿರೋಧ ಪಕ್ಷಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿವೆ. ಸಂಸತ್ ಭವನದ ಮುಂದೆ ಚಂದಾ ಚೋರಿ ಹೆಸರಿನಲ್ಲಿ ಆಯೋಜಿಸಲಾದ ಸಾಂಕೇತಿಕ ಪ್ರತಿಭಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ಅರ್ಚಕರ ವೇಷ ಧರಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಸಂಸತ್ ಮೆಟ್ಟಿಲುಗಳ ಮೇಲೆ ಇರಿಸಲಾಗಿದ್ದ ದೇಣಿಗೆ ಪೆಟ್ಟಿಗೆಗಳ ಬಳಿ ಶ್ರೀರಾಮನ ಚಿತ್ರದೊಂದಿಗೆ ಅವರು ಕುಳಿತಿದ್ದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಸಂಸದರು ದೇಣಿಗೆ ನೀಡಿದರು. ಆದರೆ ಪಪ್ಪು ಯಾದವ್ ಸಾಂಕೇತಿಕವಾಗಿ ದೇವಾಲಯದ ದೇಣಿಗೆಗಳನ್ನು ತಮ್ಮ ಜೇಬಿನಲ್ಲಿ ಹಾಕಿಕೊಳ್ಳುವ ಮೂಲಕ ಹೇಗೆ ಕದಿಯಲಾಗುತ್ತಿದೆ ಎಂಬುದನ್ನು ಪ್ರದರ್ಶಿಸಿದರು.

ವಿರೋಧ ಪಕ್ಷದ ವಿವಿಧ ಸಂಸದರು ಈ ಪ್ರತಿಭಟನೆಯಲ್ಲಿ ಭಾಗಿಯಾದರು. ಹಣದೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಪಪ್ಪು ಯಾದವ್ ಅವರನ್ನು ಸಮಾಜವಾದಿ ಪಕ್ಷದ ಸಂಸದರು ತಡೆದು ಸಾರ್ವಜನಿಕವಾಗಿ ಪ್ರಶ್ನಿಸಿದರು. ಪ್ರತಿಭಟನೆ ಸಮಯದಲ್ಲಿ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಲಾಯಿತು . ಸದನದಲ್ಲಿ ಅವರ ಅನುಪಸ್ಥಿತಿಯನ್ನು ಪ್ರಶ್ನಿಸಿದ ನಾಯಕರು ಶಾ ಖುದ್ದಾಗಿ ಸಂಸತ್ತಿಗೆ ಬರಬೇಕು ಮತ್ತು ಉತ್ತರಿಸಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.