ಮುಸ್ಲಿಮರ ಮನೆಗಳನ್ನು ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ ಉತ್ತರಾಖಂಡದ ಸಾಧು

0
386

ಸನ್ಮಾರ್ಗ ವಾರ್ತೆ

ಉತ್ತರಾಖಂಡದ ಕೇದಾರನಾಥದಲ್ಲಿರುವ ಸಾಧುವೊಬ್ಬರು ಮುಸ್ಲಿಮರಿಗೆ ಹಿಂಸೆಯ ಬೆದರಿಕೆ ಹಾಕಿದ್ದಾರೆ. ಭಾರತವನ್ನು ಬಿಟ್ಟು ಮುಸ್ಲಿಂ ಬಹು ಸಂಖ್ಯಾತ ದೇಶಕ್ಕೆ ಹೋಗುವಂತೆ ಅಥವಾ ಮುಸ್ಲಿಮರ ಮನೆಗಳಲ್ಲಿ ಬಾಂಬುಗಳನ್ನು ಇಡುವಂತೆ ಕರೆ ಕೊಟ್ಟಿದ್ದಾರೆ ಸಾಧು ಹೀಗೇ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮುಸ್ಲಿಮರೇ ನಿಮ್ಮ ಬಟ್ಟೆ ಮತ್ತು ಬ್ಯಾಗುಗಳನ್ನು ಪ್ಯಾಕ್ ಮಾಡಿ ಮುಸ್ಲಿಂ ದ್ವೇಷಕ್ಕೆ ಹೋಗಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಇದು ಸಾಧ್ಯವಾಗದಿದ್ದರೆ ಮುಸ್ಲಿಮರ ಮನೆಗಳಲ್ಲಿ ಬಾಂಬುಗಳನ್ನ ಇಡುವುದಾಗಿ ಅವರು ಬೆದರಿಸಿದ್ದಾರೆ. ಮುಸ್ಲಿಮರು ಎಲ್ಲೇ ಸಿಕ್ಕರೂ ಅವರನ್ನು ಹೊಡೆಯಲಾಗುತ್ತದೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ಇಡೀ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಲಾದ ಹೇಳಿಕೆಗಳು ಆನ್ಲೈನ್ ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಈ ವಿಡಿಯೋದ ಸತ್ಯಾತೆಯನ್ನು ಗುರುತಿಸಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಲಾಗಿದೆ.

ಇದು ಧಾರ್ಮಿಕ ಭಿನ್ನಾಭಿಪ್ರಾಯ ಅಲ್ಲ. ನಿರ್ದಿಷ್ಟ ಧರ್ಮದ ವಿರುದ್ಧದ ಗಂಭೀರ ಹಿಂಸಾಚಾರದ ಬೆದರಿಕೆ. ಭಾರತವು ಸಾಂವಿಧಾನಿಕ ಪ್ರಜಾತಂತ್ರ ರಾಷ್ಟ್ರವಾಗಿದೆ. ಯಾವುದೇ ನಾಗರಿಕನ ಧರ್ಮ ಸ್ಥಾನಮಾನ ಅಥವಾ ಧಾರ್ಮಿಕ ಗುರುತು ಏನೇ ಇರಲಿ ಮತ್ತೊಂದು ಸಮುದಾಯವನ್ನು ಬಾಂಬುಗಳಿಂದ ಸಾಯಿಸುವ ಬೆದರಿಕೆ ಹಾಕುವುದಕ್ಕೆ ಅವಕಾಶ ಇಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.