ಹೊಸದಿಲ್ಲಿ, ಜು. 23: ಕಾಶ್ಮೀರ ವಿಷಯದಲ್ಲಿ ಸಮಸ್ಯೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ಯಾವುದೇ ಸಹಾಯವನ್ನು ಕೇಳಿಲ್ಲ ಎಂದು ವಿದೇಶ ಸಚಿವ ಎಸ್. ಜೈಶಂಕರ್ ಹೇಳಿದರು. ಪಾಕಿಸ್ತಾನದೊಂದಿಗಿನ ಎಲ್ಲ ಸಮಸ್ಯೆಗಳನ್ನು ಉಭಯ ಕಕ್ಷಿ ಚರ್ಚೆಗಳ ಮೂಲಕ ಪರಿಹರಿಸಿಕೊಳ್ಳಬೇಕಾಗಿದೆ ಎಂದು ಅವರು ರಾಜ್ಯಸಭೆಗೆ ತಿಳಿಸಿದರು.
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಪ್ರಧಾನಿ ನರೇಂದ್ರ ಮಓದಿ ಅಮೆರಿಕದ ಸಹಾಯವನ್ನು ಕೇಳಿದ್ದಾರೆಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು ಈ ಕುರಿತು ಜೈಶಂಕರ್ ರಾಜ್ಯಸಭೆಯಲ್ಲಿ ಸ್ಪಷ್ಟಣೆ ನೀಡಿದರು. ಪಾಕಿಸ್ತಾನದೊಂದಿಗಿನ ಎಲ್ಲ ಒಪ್ಪಂದಗಳು ಎರಡು ದೇಶಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಗಡಿದಾಟಿ ನಡೆಯುವ ಭಯೋತ್ಪಾದನೆಯನ್ನು ಪಾಕಿಸ್ತಾನ ನಿಲ್ಲಿಸಿದರೆ ಮಾತ್ರ ಎರಡು ದೇಶಗಳ ನಡುವೆ ಚರ್ಚೆ ಆರಂಭವಾಗಲಿದೆ. ಶಿಮ್ಲಾ ಒಪ್ಪಂದ ಲಾಹೋರ್ ಘೋಷಣೆ ಸಹಿತ ಕಾಶ್ಮೀರ ಸಮಸ್ಯೆಯ ಚರ್ಚೆಗೆ ದಾರಿಗಳಿವೆ. ನನ್ನ ವಿವರಣೆ ಈ ವಿಚಾರದಲ್ಲಿದ್ದ ಆತಂಕವನ್ನು ದೂರ ಮಾಡಿರಬಹುದು ಎಂದು ಜೈಶಂಕರ್ ರಾಜ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿವರಣೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿ ಗಲಾಟೆ ಮಾಡಿದೆ.












