ಮುಸ್ಲಿಂ ದ್ವೇಷದ ಫೇಸ್‌ಬುಕ್‌ ಪೋಸ್ಟ್: ಕೇರಳ ಇನ್ಸ್ಪೆಕ್ಟರ್ ವಿಜೇಶ್ ಅಮಾನತು

0
360

ಸನ್ಮಾರ್ಗ ವಾರ್ತೆ

ಫೇಸ್‌ಬುಕ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತ್ತು ಕೋಮು ದ್ವೇಷವನ್ನು ಹರಡುವ ಪೋಸ್ಟ್ ಹಂಚಿಕೊಂಡದ್ದಕ್ಕಾಗಿ ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಲ ಪೊಲೀಸ್ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಕೆ ವಿಜೇಶಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಪಾಲಿಟ್ರಿಕ್ಸ್ ಎಂಬ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾದ ವಿಡಿಯೋವನ್ನು ವಿಜೇಶ್ ಅವರು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಹಿಜಾಬ್ ಧರಿಸಿದ ಯುವತಿ ಒಬ್ಬಳು ಓಣಂ ಪೂಕ್ಕಳಂನ್ನು ಒದೆಯುತ್ತಿರುವುದಾಗಿ ತೋರಿಸಲಾಗಿದೆ. ಈ ಘಟನೆ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ವಿಜೇಶ್ ಹಂಚಿಕೊಂಡ ಈ ಪೂಕಲಮ್ ಅನ್ನು ಆರಂಭದಲ್ಲಿ ನಾಯಿ ಹಾನಿಗೊಳಿಸಿದೆ ಎಂದು ನಂಬಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳು ಬೆರೆಯದೆ ಮಾಹಿತಿಯನ್ನು ನೀಡಿದೆ. ತೊಡುಪುಲ ಉಪ ಪೋಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ ವಿಶೇಷ ವರದಿಯ ನಂತರ ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ನಸೀಮ್ ಅವರು ಆಗಸ್ಟ್ 28ರಂದು ವಿಜೇಶ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದರು.

ಇನ್ಸ್ಪೆಕ್ಟರ್ ವರ್ತನೆಯ ಬಗ್ಗೆ ವಿವರವಾದ ಇಲಾಖಾ ವಿಚಾರಣೆ ನಡೆಯುವವರೆಗೆ ಅಮಾನತುಗೊಳಿಸಲು ಆದೇಶಿಸಲಾಗಿದೆ.

ಮುಸ್ಲಿಂ ಯೂತ್ ಲೀಗ್‌ನ ತೋಡುಪುಲ ವಿಧಾನಸಭಾ ಕ್ಷೇತ್ರ ಸಮಿತಿಯು ವಿಜೇಶ್ ವಿರುದ್ಧ ದೂರು ದಾಖಲಿಸಿತ್ತು.