‘ಜೈಶ್ರೀರಾಂ’ ಕೊಲೆಯ ಕೂಗು ಆಗಿದೆ: ಪ್ರಧಾನಿ ಮೋದಿಗೆ ಸಿನಿಮಾ ರಂಗದ ಪ್ರಮುಖರಿಂದ ಆಕ್ಷೇಪಣಾ ಪತ್ರ

0
2335

ಹೊಸದಿಲ್ಲಿ, ಜು. 24ಃ ದೇಶದಲ್ಲಿ ನಡೆಯುತ್ತಿರುವ ಜನರ ಗುಂಪು ದಾಳಿ ಮತ್ತು ಧರ್ಮಾಧಾರಿತವಾದ ಅಪರಾಧ ಕೃತ್ಯಗಳನ್ನು ಬೆಟ್ಟು ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಚಲನಚಿತ್ರ ಕ್ಷೇತ್ರದ 49 ಮಂದಿ ಪ್ರಮುಖರು ಪತ್ರ ಬರೆದಿದ್ದಾರೆ. ಜೈಶ್ರೀರಾಂ ಎನ್ನುವುದು ಬಹುಸಂಖ್ಯಾತ ಸಮುದಾಯದ ಪವಿತ್ರ ಕೂಗು ಎನಿಸಿಕೊಂಡಿದೆ. ರಾಮನನ್ನು ಅಪಮಾನಿಸುವ ಕೃತ್ಯಗಳನ್ನು ನಿಲ್ಲಿಸಬೇಕಾಗಿದೆ ಎಂದು 23 ನೇ ತಾರೀಕಿನಂದು ಕಳುಹಿಸಿದ ಬಹಿರಂಗ ಪತ್ರದಲ್ಲಿ ಅವರೆಲ್ಲ ಆಗ್ರಹಿಸಿದ್ದಾರೆ.

ಭಾರತೀಯ ಎಂಬ ನೆಲೆಯಲ್ಲಿ ಅಭಿಮಾನವಿದೆ. ಜೊತೆಗೆ ಶಾಂತಿಯನ್ನು ಬಯಸುತ್ತೇವೆ. ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದ ನಾವು ಅತ್ಯಂತ ಆತಂಕಿತರಾಗಿದ್ದೇವೆ. ಭಾರತ ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ಗಣರಾಜ್ಯವಾಗಿದೆ ಎಂದು ನಮ್ಮ ಸಂವಿಧಾನ ಹೇಳುತ್ತಿದೆ. ಜಾತಿ, ಧರ್ಮ, ವರ್ಗ ವ್ಯತ್ಯಾಸವಿಲ್ಲದೆ ಎಲ್ಲ ಪ್ರಜೆಗಳು ಸಮಾನರು. ಸಂವಿಧಾನ ಪ್ರಜೆಗಳಿಗೆ ನೀಡುವ ಹಕ್ಕುಗಳನ್ನು ದೃಢಪಡಿಸಬೇಕೆಂದು ಪತ್ರದಲ್ಲಿ ಬರೆಯಲಾಗಿದೆ.

ಮುಸ್ಲಿಂ , ದಲಿತ, ಇತರ ಹಿಂದುಳಿದ ವರ್ಗಗಳ ವಿರುದ್ಧ ನಡೆಯುತ್ತಿರುವ ದಾಳಿಗಳು ಇಲ್ಲದಾಗಲು ತುರ್ತು ಕ್ರಮ ಸ್ವೀಕರಿಸಬೇಕು. 2016ರಲ್ಲಿ ದಲಿತರ ವಿರುದ್ಧ 840 ದಾಳಿಗಳು ನಡೆದಿವೆ ಎಂದು ನ್ಯಾಶನಲ್ ಕ್ರೈಂ ಬ್ಯೂರೊ ವರದಿ ತಿಳಿಸುತ್ತಿದೆ. ಕೆಲವು ದಾಳಿಗಳ ಕುರಿತು ತಾವು ಪಾರ್ಲಿಮೆಂಟಿನಲ್ಲಿ ಪ್ರಸ್ತಾಪಿಸಿ ಆಕ್ಷೇಪಿಸಿದ್ದೀರಿ. ಆದರೆ ದಾಳಿಗಳು ನಿಲ್ಲುವುದಿಲ್ಲ. ನೀವು ಇಂತಹ ದಾಳಿಗಳಲ್ಲಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ಸಿನೆಮಾರಂಗದ ಪ್ರಮುಖರಾದ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್, ಆಡೂರು ಗೂಪಾಲಕೃಷ್ಣನ್, ಕಂಕನಾ ಸೇನ್ ಶರ್ಮ, ಸೌಮಿತ್ರ ಚಟರ್ಜಿ, ಬಿನಾಯಕ್ ಸೇನ್, ರೇವತಿ, ಶ್ಯಾಂ ಬೆನಗಲ್, ಶುಭ ಮುದ್ಗೆ, ರೂಪಂ ಇಸ್ಲಾಂ, ಅನುಪಂ ರಾಯ್, ಋದಿಸೇನ್ ಮುಂತಾದವರು ಪತ್ರಕ್ಕೆ ಸಹಿ ಹಾಕಿದ್ದಾರೆ.