ಬೀದಿ ನಾಯಿಗಳಿಂದ ಪಾರಾಗಲು ಮನೆಯೊಳಗೆ ಓಡಿ ಬಂದ ದಲಿತ ಯುವಕನಿಗೆ ಬೆಂಕಿ ಹಚ್ಚಿ ಕೊಲೆ

0
2034

ಲಕ್ನೊ, ಜು. 24: ಬೀದಿ ನಾಯಿಗಳಿಂದ ಪಾರಾಗಲಿಕ್ಕಾಗಿ ಎದುರು ಸಿಕ್ಕಿದ ಮನೆಯೊಳಗೆ ನುಗ್ಗಿದ ದಲಿತ ಯುವಕನನ್ನು ಕಳ್ಳ ಎಂದು ಆರೋಪಿಸಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಉತ್ತರಪ್ರದೇಶದ ಬಾರಬಂಕಿ ಎಂಬಲ್ಲಿ ಸೋಮವಾರ ಘಟನೆ ನಡೆದಿತ್ತು. ಗಂಭೀರ ಸುಟ್ಟಗಾಯಗಳೊಂದಿಗೆ ದಲಿತ ಯುವಕ 28 ವರ್ಷದ ಸುಜಿತ್ ಕುಮಾರ್ ಆಸ್ಪತ್ರೆಯಲ್ಲಿ ಮೃತಪಟ್ಟಿದಾನೆ.

ರಾತ್ರೆ ಎರಡು ಗಂಟೆಗೆ ಸಂಬಂಧಿಕನ ಮನೆಗೆ ಹೋಗುತ್ತಿದ್ದ ವೇಳೆ ಬೀದಿನಾಯಿಗಳು ಬೊಗಳಿ ಓಡಿಸಿಕೊಂಡು ಬರುತ್ತಿವೆ ಎಂದು ಹೆದರಿ ಎದುರಿಗೆ ಸಿಕ್ಕ ಮನೆಗೆ ಸುಜಿತ್ ಕುಮಾರ್ ಓಡಿಹೋಗಿ ಒಳನುಗ್ಗಿದ್ದ. ಮನೆಯವರು ಈತನನ್ನು ಕಳ್ಳನೆಂದು ಶಂಕಿಸಿ ಮೊದಲು ಹೊಡೆದಿದ್ದಾರೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಎಸ್ಪಿ ಆಕಾಶ್ ತೋಮರ್ ತಿಳಿಸಿದರು. ಘಟನೆಯಲ್ಲಿ ನಾಲ್ಕು ಮಂದಿಯ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.