ಲಾದೆನ್‍ನನ್ನು ಬಂಧಿಸಲು ಸಹಕರಿಸಿದ್ದು ಐಎಸ್‍ಐ-ಪಾಕ್ ಪ್ರಧಾನಿ ಇಮ್ರಾನ್ ಖಾನ್

0
560

ವಾಷಿಂಗ್ಟನ್, ಜು. 24: ಭಯೋತ್ಪಾದಕ ಸಂಘಟನೆ ಅಲ್‍ಕಾಯಿದ ಮುಖ್ಯಸ್ಥ ಉಸಾಮಾ ಬಿನ್ ಲಾದೆನ್‍ನನ್ನು ಸೆರೆಹಿಡಿದು ಕೊಲೆಮಾಡಲು ಸಿಐಎಗೆ ಐಎಸ್‍ಐ ಸಹಾಯ ಮಾಡಿತ್ತು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಫೋಕ್ಸ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಐಎಸ್‍ಐ ಪಾಕಿಸ್ತಾನದ ಗುಪ್ತಚರ ಸಂಘಟನೆಯಾಗಿದೆ.
ಉಸಾಮಾ ಬಿನ್ ಲಾದೆನ್‍ನ್ನು ಹಿಡಿಯಲು ಸಹಾಯ ಮಾಡಿದ ಪಾಕಿಸ್ತಾನದ ವೈದ್ಯ ಶಕೀಲ್ ಅಫ್ರಿದಿಯವರನ್ನು ಬಿಡುಗಡೆಗೊಳಿಸುವಿರಾ ಎನ್ನು ಪ್ರಶ್ನೆಗೆ ಈ ರೀತಿ ಅವರು ಉತ್ತರಿಸಿದ್ದಾರೆ.

ಅಮೆರಿಕಕ್ಕಾಗಿ ಬೇಹುಗಾರಿಕೆ ನಡೆಸಿದ ವ್ಯಕ್ತಿ ಎಂಬ ನೆಲೆಯಲ್ಲಿ ಡಾ.ಶಕೀಲ್‍ರ ಬಿಡುಗಡೆ ಭಾವನಾತ್ಮಕ ವಿಷಯವಾಗಿದೆ. ಭಯೋತ್ಪಾದನೆ ಆರೋಪಿಸಿ ಅಮೆರಿಕ 86 ವರ್ಷ ಜೈಲು ಶಿಕ್ಷೆ ನೀಡಿದ ಡಾ. ಆಫಿಯಾ ಸಿದ್ದೀಕಿಯವರನ್ನು ಬಿಡುಗೊಳಿಸುವುದಕ್ಕೆ ಬದಲಿಯಾಗಿ ಡಾ. ಶಕೀಲ್‍ರನ್ನು ಬಿಡುಗಡೆಗೊಳಿಸುವುದನ್ನು ಪರಿಗಣಿಸಬಹುದಾಗಿದೆ ಎಂದು ಇಮ್ರಾನ್ ಖಾನ್ ಹೇಳಿದರು. ಈ ವಿಷಯವನ್ನು ಟ್ರಂಪ್‍ರೊಂದಿಗಿನ ಚರ್ಚೆಯ ವೇಳೆ ಪ್ರಸ್ತಾಪಿಸಿಲ್ಲ ಎಂದು ಇಮ್ರಾನ್ ತಿಳಿಸಿದರು.

ಅಮೆರಿಕಕ್ಕೆ ಮಿತ್ರದೇಶವಾದ ಪಾಕಿಸ್ತಾನಕ್ಕೆ ಉಸಾಮಾನ ಕುರಿತು ಮಾಹಿತಿ ನೀಡಲು ಸಾಧ್ಯವಿದೆ ಎಂದಾದರೆ ಬಂಧಿಸಲೂ ಸಾಧ್ಯವಿದೆ. ಭಯೋತ್ಪಾದನೆಯ ವಿರುದ್ಧ ನಾವು ಹೋರಾಡುತ್ತಿರುವಂತೆ ಅಮೆರಿಕ ದಾಳಿ ಮಾಡಿ ಉಸಾಮಾನನ್ನು ಹತ್ಯೆ ಮಾಡಿದ್ದು ಅಚ್ಚರಿ ಸೃಷ್ಟಿಸಿತು. ಸಖ್ಯದೇಶವಾಗಿಯೂ ಅಮೆರಿಕ ನಮ್ಮಲ್ಲಿ ನಂಬಿಕೆ ಹೊಂದಲಿಲ್ಲ. ನಮ್ಮ ಗಡಿಯೊಳಗೆ ನುಗ್ಗಿ ಒಬ್ಬನನ್ನು ಬಾಂಬಿಟ್ಟು ಕೊಲೆ ಮಾಡಿತು ಎಂದು ಇಮ್ರಾನ್ ಹೇಳಿದರು. 2011 ಮೇ ಎರಡರಂದು ಅಬಟಾಬಾದಿನಲ್ಲಿ ಅಮೆರಿಕ ವಿಶೇಷ ಸೇನೆ ಸೆರೆಹಿಡಿದು ಉಸಾಮಾನನ್ನು ಕೊಂದು ಹಾಕಿತು. ಅಲ್ಲಿಯವರಗೆ ನಮಗೆ ಯಾವುದೇ ವಿವರ ಸಿಕ್ಕಿರಲಿಲ್ಲ ಎಂದು ಪಾಕಿಸ್ತಾನ ಹೇಳುತ್ತಿತ್ತು. ಆದರೆ ಇಮ್ರಾನ್‍ರ ಹೇಳಿಕೆ ಇದನ್ನು ಅಲ್ಲಗಳೆದಿದೆ.