ಸನ್ಮಾರ್ಗ ವಾರ್ತೆ
ಪಾಲಕ್ಕಾಡ್: ಪಾಲಕ್ಕಾಡ್ನ ಪಟ್ಟಾಂಬಿ ದೇವಸ್ಥಾನದಲ್ಲಿ ಬಿಜೆಪಿ ನಾಯಕರು ಕಳವು ಎಸಗಿದ್ದಾರೆ. ಪಟ್ಟಾಂಬಿಯ ಕೊಪ್ಪಂನ ಇರಾಯೂರ್ನಲ್ಲಿರುವ ಶ್ರೀ ತಿರುವಳಿಯನಾಡ್ ಭಗವತಿ ದೇವಸ್ಥಾನದಲ್ಲಿ ಈ ಕಳವು ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಮರೆಮಾಚಿ, ಕಬ್ಬಿಣದ ಗ್ರಿಲ್ ಅನ್ನು ಕತ್ತರಿಸಿ ಕಳ್ಳತನ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕೊಪ್ಪಂ ಮಂಡಲ ಉಪಾಧ್ಯಕ್ಷ ಎಂ. ಪರಮೇಶ್ವರನ್ ಮತ್ತು ಬಿಜೆಪಿ ಮಾಜಿ ಪಂಚಾಯತ್ ಅಧ್ಯಕ್ಷ ಚಿಳ್ಳವೀಟಿಲ್ ಗೋಪಿನಾಥನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯು ಸೆಪ್ಟೆಂಬರ್ 3 ರಂದು ನಡೆದಿದೆ.
ದೇವಸ್ಥಾನದ ಸಭಾಂಗಣದ (ಆಡಿಟೋರಿಯಂ) ಬಳಿಯಿದ್ದ 30 ಅಡಿ ಉದ್ದ, 4 ಇಂಚು ಅಗಲ ಮತ್ತು 1/2 ಇಂಚು ದಪ್ಪವಿರುವ ಕಬ್ಬಿಣದ ಚೌಕಾಕಾರದ ಕೊಳವೆಯನ್ನು (ಸ್ಕ್ವೇರ್ ಪೈಪ್) ಕತ್ತರಿಸಿ ಒಯ್ದಿದ್ದಾರೆ ಎಂದು ವರದಿಯಾಗಿದೆ.












