ಬೆಂಗಳೂರು, ಜು. 26: ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯುರಪ್ಪ ಇಂದು ಸಂಜೆ ಆರು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು 12:30ಕ್ಕೆ ಪ್ರಮಾಣ ವಚನಕ್ಕೆ ಅವಕಾಶ ನೀಡಬೇಕೆಂದು ಕೋರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿದ್ದರು. ರಾಜ್ಯಪಾಲರು ಅರು ಗಂಟೆಗೆ ಪ್ರಮಾಣ ವಚನಕ್ಕೆ ಅವಕಾಶ ನೀಡಿದರೆಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದವನು ನಾನು. ಆದ್ದರಿಂದ ಶಾಸಕಾಂಗ ಪಕ್ಷ ಸಭೆಯ ಅಗತ್ಯವಿಲ್ಲ. ಇಂದು ಪ್ರಮಾಣ ವಚನ ಸ್ವೀಕರಿಸುವೆ ಎಂದು ಯಡಿಯೂರಪ್ಪ ಈ ಹಿಂದೆಯೇ ತಿಳಿಸಿದ್ದರು. ಕಳೆದ ದಿವಸ ಸ್ಪೀಕರ್ ಮೂರು ಶಾಸಕರನ್ನು ಅನರ್ಹಗೊಳಿಸಿದ್ದು ಇದು ಬಿಜೆಪಿಗೆ ಹಿನ್ನಡೆಯಾಗಿದೆ. ಸದನದಲ್ಲಿ ಬಹುಮತ ಸಾಬೀತು ಮಾಡಲು ಸಾಧ್ಯವಿರುವುದರಿಂದ ಸರಕಾರ ರಚಿಸುವ ಅರ್ಹತೆ ತನಗಿದೆ ಎಂದು ಬಿಜೆಪಿ ವಾದಿಸಿದೆ.
ಈ ನಡುವೆ, ರಾಜಭವನಕ್ಕೆ ತೆರಳುವ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ದಾರಿ ಮಧ್ಯೆ ಪೇಜಾವರ ಶ್ರೀಗಳು ಸಿಕ್ಕಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ.












