ಎಸ್ಐಆರ್: ಸದ್ಯ ಸರ್ಕಾರದಿಂದ ತನಿಖೆ ಇಲ್ಲ, ಚುನಾವಣಾ ಆಯೋಗದ ಕ್ರಮವನ್ನು ನೋಡಿ ನಿರ್ಧಾರ: ಡಿಕೆಶಿ

0
236

ಸನ್ಮಾರ್ಗ ವಾರ್ತೆ

ಎಸ್ಐಆರ್ ಅಕ್ರಮ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಪ್ರತ್ಯೇಕ ತನಿಖೆಯನ್ನು ಸದ್ಯಕ್ಕೆ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. . ಚುನಾವಣಾ ಆಯೋಗವೇ ಈ ಬಗ್ಗೆ ಈಗ ತನಿಖೆ ಮಾಡುತ್ತಿದೆ. ಚುನಾವಣಾ ಆಯೋಗಕ್ಕೂ ಸತ್ಯ ದರ್ಶನ ಆಗಿದೆ. ಅವರು ಏನೇನು ಕ್ರಮ ಕೈಗೊಳ್ಳುತ್ತಾರೆಯೋ ನೋಡೋಣ. ಆ ಬಳಿಕ ನಮ್ಮ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೇಹೆಬ್ಬಾಗಿಲು ಗ್ರಾಮದ ಹೆಲಿಪ್ಯಾಡ್‌ನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚುನಾವಣಾ ಆಯೋಗವೇ ಈ ಬಗ್ಗೆ ಈಗ ತನಿಖೆ ಮಾಡುತ್ತಿದೆ. ಎಲ್ಲಿ ನಮೂನೆಗಳು ಮುದ್ರಣವಾದವು? ಹೇಗೆ ಬಿಜೆಪಿಯವರ ಕೈಗೆ ತಲುಪಿದವು ಎಂಬುದೆಲ್ಲಾ ಗೊತ್ತಾಗುತ್ತಿದೆ. ಚುನಾವಣಾ ಆಯೋಗಕ್ಕೂ ಸತ್ಯ ದರ್ಶನ ಆಗಿದೆ. ಅವರು ಏನೇನು ಕ್ರಮ ಕೈಗೊಳ್ಳುತ್ತಾರೆಯೋ ನೋಡೋಣ. ಆ ಬಳಿಕ ನಮ್ಮ ತೀರ್ಮಾನ ಮಾಡುತ್ತೇವೆ ಎಂದರು.

ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ. ಯಾವ ಕಾನೂನನ್ನೂ ನಾನು ಉಲ್ಲಂಘಿಸಿಲ್ಲ. ಸಮಸ್ಯೆ ಆಗಿರುವುದನ್ನು ಕಾನೂನಾತ್ಮಕವಾಗಿ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ತಪ್ಪೇನಿದೆ? ಅವರು ಸಮಸ್ಯೆ ಬಗೆ ಚರ್ಚೆ ಮಾಡುವುದಕ್ಕೆ ಸಮಯ ಕೇಳಿದ್ದರು. ಇದಕ್ಕೆಲ್ಲ ಯಾಕೆ ಸಮಯ ಎಂದು ಕೇಳಿದ ನಾವು ಅಲ್ಲೇ ಕುಳಿತಿದ್ದೆವು. ಕೊನೆಗೂ ಪರಿಹಾರ ಸಿಕ್ಕಿದೆ. ಇದರಲ್ಲಿ ಧರಣಿ ಪ್ರಶ್ನೆ ಎಲ್ಲಿಂದ ಬಂತು? ಎಂದು ಕೇಳಿದರು.