ಹೊಸದಿಲ್ಲಿ, ಜು. 26: ಕಾರ್ಗಿಲ್ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಅಮೆರಿಕದ ಒತ್ತಡವನ್ನು ಮೀರಿ ಇಸ್ರೇಲ್ ಸಹಾಯ ಮಾಡಿತ್ತು. ಈ ವಿಷಯವನ್ನು ಅಂತಾರಾಷ್ಟ್ರೀಯ ವಿಷಯಗಳ ಪ್ರೊಫೆಸರ್ ನಿಕೊಲಸ್ ಬ್ಲೇರಲ್ರು ತನ್ನ ಗ್ರಂಥದ ಇವೈಲ್ಯೂಏಶನ್ ಆಫ್ ಇಂಡಿಯಾಸ್ ಇಸ್ರೇಲ್ ಪಾಲಿಸಿಯಲ್ಲಿ ಬರೆದಿದ್ದಾರೆ. ಇಸ್ರೇಲ್ ಭಾರತಕ್ಕೆ ನೇರವಾಗಿ ಮಾರ್ಟರ್ ಮದ್ದುಗಂಡಗಳು ಮತ್ತು ಇತರ ಆಯುಧಗಳನ್ನು ಸರಬರಾಜು ಮಾಡಿತ್ತು. ಭಾರತೀಯ ಯುದ್ಧ ವಿಮಾನಗಳು ಮತ್ತು ನಿರೀಕ್ಷಣಾ ಡ್ರೋಣ್ಗಾಗಿ ಇಸ್ರೇಲ್ ಲೇಸರ್ ಗೈಡೆಡ್ ಮಿಸೈಲನ್ನು ಒದಗಿಸಿತ್ತು.
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಸೇನೆ ತನ್ನ ಮಿಶನ್ನಲ್ಲಿ ಯಶಸ್ವಿಯಾಗಲು ಬೇರೆ ಬೇರೆ ರೀತಿಯ ಕಷ್ಟಗಳನ್ನು ಎದುರಿಸಬೇಕಾಯಿತು. ಲೇಸರ್ ಗೈಡೆಡ್ ಮಿಸೈಲ್ ಇಲ್ಲದೆ ಭೂಸೇನೆಗೆ ಸಹಕಾರ ನೀಡುವುದು ಕಷ್ಟವಿತ್ತು. ಎತ್ತರದ ಪರ್ವತದಲ್ಲಿ ಅಡಗಿದ್ದ ಪಾಕಿಸ್ತಾನಿ ನುಸುಳುಕೋರರ ಬಂಕರ್ ಭಾರತೀಯ ಸೇನೆಗೆ ತಲೆನೋವು ಆಗಿತ್ತು. ಇದೇವೇಳೆ ಇಸ್ರೇಲಿನ ಲೇಸರ್ ಗೈಡೆಡ್ ಮಿಸೈಲ್ ವಾಯುಸೇನೆಯ ಕೆಲಸವನ್ನು ಸುಲಭಗೊಳಿಸಿತು. ವಾಯುಸೇನೆಯ ಮಿರಾಜ್ 2000 ಎಚ್ ಯುದ್ಧವಿಮಾನದಲ್ಲಿ ಲೇಸರ್ ಗೈಡೆಡ್ ಮಿಸೈಲ್ನ್ನು ಇರಿಸಿಕೊಳ್ಳಲಾಗಿದೆ. ನಂತರ ಪಾಕಿಸ್ತಾನಕ್ಕೆ ಬುದ್ಧಿಕಲಿಸಲಾಯಿತು.
ಕಾರ್ಗಿಲ್ ಯುದ್ಧದ ವೇಳೆ ಅಮೆರಿಕ ಇಸ್ರೇಲ್ ಭಾರತಕ್ಕೆ ಆಯುಧ ನೀಡದಂತೆ ಅಡ್ಡಬಂದಿತ್ತು. ಆಯುಧ ನೀಡಲು ತಡ ಮಾಡಲು ಸೂಚಿಸಿತ್ತು. ಇದನ್ನು ಲೆಕ್ಕಿಸದೆ ಇಸ್ರೇಲ್ ಭಾರತಕ್ಕೆ ಆಯುಧಗಳನ್ನು ಒದಗಿಸಿತ್ತು.












