ಸನ್ಮಾರ್ಗ ವಾರ್ತೆ
ದುಬೈ: ತನ್ನ ಧರ್ಮದ ಬಗ್ಗೆ ಅಥವಾ ಇತರ ಧರ್ಮಗಳ ಬಗ್ಗೆ ತಾನು ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ ಎಂದು ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಸುದ್ದಿಗಳ ವಿರುದ್ಧ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಹೆಸರಿನಲ್ಲಿ ಬರುವ ಹೆಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಶೇರ್ ಮಾಡಬಾರದೆಂದು ಇನ್ಸ್ಟಾಗ್ರಾಮ್ನ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದರು.
ಎಲ್ಲಾ ಧರ್ಮಗಳನ್ನು ಗೌರವಿಸುವ ವ್ಯಕ್ತಿಯಾಗಿದ್ದು, ತಮ್ಮ ಧರ್ಮದ ಬಗ್ಗೆ ಅಥವಾ ಇತರ ಧರ್ಮಗಳ ಬಗ್ಗೆ ಮಾಡಲಾಗುತ್ತಿರುವ ಸುಳ್ಳು ಆರೋಪಗಳು ನೋವುಂಟುಮಾಡಿವೆ ಎಂದು ಅವರು ತಿಳಿಸಿದ್ದಾರೆ.
ಭಾರತಕ್ಕಾಗಿ ಇರ್ಫಾನ್ ಪಠಾಣ್ 29 ಟೆಸ್ಟ್, 120 ಏಕದಿನ, 24 ಟಿ20 ಕ್ರಿಕೆಟ್ ಆಡಿರುವ ಇರ್ಫಾನ್ ಪಠಾಣ್ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಗಾಗಿ ಆಡಲು ಅವರು ಯುಎಇಯಲ್ಲಿದ್ದಾರೆ.
ಇದೇ ವೇಳೆ ಕಳೆದ ಸೀಸನ್ನಲ್ಲಿ ಭಾರತ ತಂಡದ ಕೆಲವು ಕ್ರಮಗಳಿಗಾಗಿ ಲಿಖಿತ ಕ್ಷಮೆ ಕೋರಬೇಕೆಂದು ಪಾಕಿಸ್ತಾನ ಆಗ್ರಹಿಸಿತ್ತು. ಪಂದ್ಯಾಕೂಟ ಆಯೋಜಕರು ತಳ್ಳಿಹಾಕಿದ್ದರಿಂದ ಈ ಸಲದ ಲೆಜೆಂಡ್ಸ್ ಚಾಂಪಿಯನ್ ಶಿಪ್ನಿಂದ ಪಾಕಿಸ್ತಾನ ಹಿಂದೆ ಸರಿದಿದೆ. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಇದರ ನಂತರ ಇರ್ಫಾನ್ ಪಠಾಣ್ ಹೆಸರಿನಲ್ಲಿ ಸುಳ್ಳು ಸುದ್ದಿಗಳ ಪ್ರಚಾರ ನಡೆಯುತ್ತಿದೆ












