ಹೊಸದಿಲ್ಲಿ, ಜು. 27: ವಾಹನ ಉದ್ದಿಮೆಯಲ್ಲಿ ಹತ್ತು ಲಕ್ಷ ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ವಿಷಯದಲ್ಲಿ ಬಿಜೆಪಿ ಸರಕಾರ ಮೌನವಹಿಸಿರುವುದು ತೀರಾ ಅಪಾಯಕಾರಿಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉದ್ಯೋಗ ನಷ್ಟವನ್ನು ಮಾಧ್ಯಮಗಳ ವರದಿ ಎತ್ತಿ ತೋರಿಸಿದೆ. ಪ್ರಿಯಾಂಕಾ ಈ ಗಂಭೀರ ವಿಷಯವನ್ನೆತ್ತಿ ಸರಕಾರದ ವಿರುದ್ಧ ದಾಳಿ ಮಾಡಿದ್ದಾರೆ. ವಾಹನ ಉದ್ಯಮದಲ್ಲಿ ಮಾಂದ್ಯ ಬಂದಿದೆ. ಇದು ಹೀಗೆ ಮುಂದುವರಿದರೆ ಕಾರ್ಮಿಕರಿಗೆ ಹಾನಿ. ಅವರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಆಟೊ ಪಾಟ್ರ್ಸ್ ತಯಾರಕರ ಸಂಘಟನೆ ಆಟೊಮೊಟಿವ್ ಕೋಪೋನೆಂಟ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಶನ್ ಆಫ್ ಇಂಡಿಯದ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಅವರು ಮಾತಾಡುತ್ತಿದ್ದರು.
ಹತ್ತು ಲಕ್ಷ ಉದ್ಯೋಗ ಕಳಕೊಳ್ಳಬೇಕೆನ್ನುವುದು ಚಿಕ್ಕ ವಿಷಯವಲ್ಲ. ಉದ್ಯೋಗ ನಷ್ಟ, ಅರ್ಥವ್ಯವಸ್ಥೆಗೆ ಹಾನಿಕರ ನೀತಿಗಳಲ್ಲಿ ಬಿಜೆಪಿ ಮೌನ ಪಾಲಿಸುತ್ತಿದೆ. 50 ಲಕ್ಷ ಜನರು ಕೆಲಸ ಮಾಡುವ ಅಟೊಮೊಟಿವ್ ಕೊಪೊನೆಂಟ್ ಮ್ಯಾನುಪ್ಯಾಕ್ಚರ್ಸ್ ಅಸೋಸಿಯೇಶನ್ ಆಫ್ ಇಂಡಿಯದಲ್ಲಿ ಹತ್ತು ತಿಂಗಳಿಂದ ಮಾಂದ್ಯ ಮುಂದುವರಿದಿದೆ. ವಾಹನ ಕ್ಷೇತ್ರದಲ್ಲಿ ಸಂಪೂರ್ಣ ಶೇ. ಹದಿನೆಂಟು ಏಕೀಕೃತ ಜಿಎಸ್ಟಿ ಜಾರಿಗೊಳಿಸಬೇಕೆಂದು ಅದು ಆಗ್ರಹಿಸಿದೆ.












