ಆಝಂಖಾನ್ ಕ್ಷಮೆ ಯಾಚಿಸಿದರೂ ನನ್ನಿಂದ ಕ್ಷಮಿಸಲು ಸಾಧ್ಯವಿಲ್ಲ-ರಮಾದೇವಿ

0
586

ಹೊಸದಿಲ್ಲಿ, ಜು. 27: ತನ್ನ ವಿರುದ್ಧ ಕೆಟ್ಟ ಹೇಳಿಕೆ ನೀಡಿದ ಸಮಾಜವಾದಿ ಪಾರ್ಟಿ ಸದಸ್ಯ ಅಝಂಖಾನ್‍ರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೆ ಮತ್ತು ಉಪಸಭಾಧ್ಯಕ್ಷೆಯಾದ ರಮಾದೇವಿ ಹೇಳಿದರು. ಆಝಂಖಾನ್ ವಿಷಾದ ಸೂಚಿಸಿದರೂ ತಾನು ಕ್ಷಮಿಸಲಾರೆ. ಕೆಟ್ಟ ಹೇಳಿಕೆ ನೀಡಿ ಅದಕ್ಕೆ ವಿಷಾದ ಸೂಚಿಸುವ ಮೂಲಕ ಆಝಂ ಖಾನ್ ಉಪಸಭಾಧ್ಯಕ್ಷ ಪೀಠವನ್ನು ಎರಡು ಬಾರಿ ಅಪಮಾನಿಸಿದರೆಂದು ರಮಾದೇವಿ ಆರೋಪಿಸಿದರು.

ತನಗೆ ತಕ್ಕ ಉತ್ತರ ನೀಡಬಹುದಾಗಿತ್ತು. ಆದರೆ, ತಾನು ಕುಳಿತಿರುವ ಕುರ್ಚಿಯ ಗೌರವದಿಂದಾಗಿ ಹಾಗೆ ಮಾಡಲಿಲ್ಲ. ಎಲ್ಲ ಪುರುಷರಿಗೆ ಅಮ್ಮ, ಸಹೋದರಿ, ಪುತ್ರಿ ಪತ್ನಿಯರು ಇದ್ದಾರೆ. ಆಝಂಖಾನ್ ಹೇಳಿಕೆ ಮಹಿಳೆ ಮಾತ್ರವಲ್ಲ, ಪುರುಷರ ಅಂತಸ್ತನ್ನು ಅಪಮಾನಿಸಿದೆ. ತನ್ನ ಕ್ಷೇತ್ರದ ಜನತೆ ತನ್ನಲ್ಲಿ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಆಝಂ ಖಾನ್‍ರಂತಹ ಒಬ್ಬರನ್ನು ಎದುರಿಸುವ ಶಕ್ತಿ ತನಗಿದೆ ಎಂದು ರಮಾದೇವಿ ಹೇಳಿದರು. ಮುತ್ತಲಾಕ್ ಮಸೂದೆಯ ಚರ್ಚೆಯ ವೇಳೆ ಆಝಂ ಖಾನ್ ರಮಾದೇವಿಯತ್ತ ನೋಡಿ ಕೆಟ್ಟ ಭಾಷೆ ಬಳಸಿದ್ದರು. ಸದನವನ್ನು ನಿಯಂತ್ರಿಸುತ್ತಿದ್ದ ರಮಾದೇವಿ ಬಿಜೆಪಿ ಸಂಸದರತ್ತ ನೋಡಿ ಮಾತಾಡಿದ ಆಝಂ ಖಾನ್‍ರಿಗೆ ತಮ್ಮತ್ತ ನೋಡಿ ಮಾತಾಡಲು ಹೇಳಿದರು. ಆಗ ನನಗೆ ನಿಮ್ಮ ಕಣ್ಣುಗಳತ್ತ ನೋಡಿ ಮಾತಾಡಬೇಕೆಂದು ಅನಿಸುತ್ತಿದೆ ಎಂದಿದ್ದರು. ಇದು ಸದನದಲ್ಲಿ ವಿವಾದಕ್ಕೆ ಕಾರಣವಾಗಿತ್ತು.