ಸನ್ಮಾರ್ಗ ವಾರ್ತೆ
ಶಾಂತಿ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧೀನದಲ್ಲಿರುವ ಹಿರಾ ಮಹಿಳಾ ಕಾಲೇಜ್ ಬಬ್ಬುಕಟ್ಟೆ, ಇಲ್ಲಿನ 2025 ಮತ್ತು 2026ರ ಪದವಿ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಸಮಾರಂಭವು ಕಾಲೇಜಿನ ಮುಹಮ್ಮದ್ ಸಿರಾಜುಲ್ ಹಸನ್ ಸ್ಮಾರಕ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ರವರು ಪದವಿ ಪ್ರಧಾನ ಮಾಡುತ್ತಾ ”ತಂತ್ರಜ್ಞಾನ ಬೆಳೆಯುತ್ತಿರುವ ಕಾಲ ಘಟ್ಟದಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು, ಶಿಕ್ಷಣಕ್ಕೆ ನೀತಿ ನಿಯಮಗಳಿದ್ದು ವಿದ್ಯಾರ್ಥಿಗಳು ಅದನ್ನು ಕಲಿಕೆಯ ಜೊತೆಗೆ ಅಳವಡಿಸಿಕೊಳ್ಳಬೇಕು” ಎಂದು ನೂತನ ಪದವೀಧರೆಯರಿಗೆ ಹಿತವಚನ ನೀಡಿದರು.
“ಶಿಕ್ಷಣ ಪಡೆಯುವುದು ಮುಖ್ಯವಲ್ಲ, ಆ ಶಿಕ್ಷಣವನ್ನು ಸರಿಯಾದ ಉದ್ದೇಶಕ್ಕೆ ಉಪಯೋಗಿಸಬೇಕು. ಸಮಾಜ ಸೇವೆಯಲ್ಲಿ ಮುಂದುವರಿಯಬೇಕಾದವರು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು” ಎಂದು
ಅತಿಥಿಯಾಗಿ ಆಗಮಿಸಿದ ಜ. ಮೊಹಮ್ಮದ್ ಅತ್ಹರುಲ್ಲಾಹ್ ಶರೀಫ್, ಮಾಜಿ ಅಧ್ಯಕ್ಷರು ಜೆ.ಐ.ಎಚ್ ಕರ್ನಾಟಕ, ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಂತಿ ಎಜುಕೇಶನಲ್ ಟ್ರಸ್ಟಿನ ಸದಸ್ಯೆ, ಶ್ರೀಮತಿ ಸಮೀನ ಅಫ್ಶಾನ್ ರವರು “ಶಿಕ್ಷಣ ಪಡೆದು ತಮ್ಮಲ್ಲಿ ಇಟ್ಟುಕೊಳ್ಳುವುದಲ್ಲ ಕಲಿತ ವಿದ್ಯೆಯನ್ನು ಸಮಾಜ ಸೇವೆ ಮಾಡುವ ಮೂಲಕ ಸಮಾಜದ ಒಳಿತಿಗೆ ಉಪಯೋಗವಾಗುವಂತೆ ಮಾಡಬೇಕು” ಎಂದು ತಿಳಿಸುತ್ತಾ ಶಿಕ್ಷಣದ ಅಗತ್ಯತೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ. ಎ. ಎಚ್. ಮೆಹಮೂದ್, ಕಾರ್ಯದರ್ಶಿ ಜ. ಅಬ್ದುಲ್ ಕರೀಂ ಯು.ಎ., ಸಂಚಾಲಕರು ಜ. ರಹ್ಮತುಲ್ಲಾಹ್, ಜ. ಅಬ್ದುರ್ರಹ್ಮಾನ್, ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥರು ಮೌಲಾನ ಶೊಐಬ್ ಹುಸೈನಿ ನದ್ವಿ, ಆಡಳಿತಾಧಿಕಾರಿ ಜ. ಝಾಕಿರ್ ಹುಸೈನ್, ಟ್ರಸ್ಟಿಗಳಾದ ಜ. ಅಬ್ದುಲ್ ಖಾದರ್ ಯು.ಎ, ಜ. ಮೊಹಮ್ಮದ್ ಹನೀಫ್, ಶ್ರೀಮತಿ ಸಾಜಿದ ಮೂಮಿನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಆಯಿಶಾ ಅಸ್ಮಿನ್ ಸ್ವಾಗತಿಸಿದರು, ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರೀಮತಿ ಎಲಿಝಾ ಫೆರಾವೊ ಪ್ರತಿಜ್ಞಾ ವಿಧಿ ಬೋಧಿಸಿದರು.
ಕು. ನಿಹ್ಲಾ ಫಾತಿಮಾ ತಂಡ ಪ್ರಾರ್ಥನಾ ಗೀತೆ ಹಾಡಿದರು. ಕು. ಹನಾ ಫಾತಿಮಾ ಮತ್ತು ಕು.ಫಾತಿಮಾ ನಿಶಾನ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.













