ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಶಮಾ ಮುಹಮ್ಮದ್ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುಸ್ಲಿಂ ಯುವಕರಿಗೆ ರಾಜಕೀಯ ನಾಯಕತ್ವವನ್ನು ನೀಡಲು ಮತ್ತು ಅವರನ್ನು ಮುಂಚೂಣಿಗೆ ತರಲು ಎಐಎಂಐಎಂ ಕೆಲಸ ಮಾಡುತ್ತಿದೆ ಮತ್ತು ತಾವೆಂದೂ ನೆಹರೂ, ಗಾಂಧಿ ಅಥವಾ ಯಾದವ್ ಅಲ್ಲ, ಬದಲಾಗಿ ಸ್ವಂತ ಯುವ ಜನತೆಯನ್ನು ನಾಯಕರನ್ನಾಗಿ ಮಾಡಲು ಬಯಸುತ್ತೇವೆ ಎಂದು ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಶಮಾ ಮುಹಮ್ಮದ್ ಅವರು ಉವೈಸಿ ಭಾರತದೊಳಗೆ ‘ಪಾಕಿಸ್ತಾನವನ್ನು ಸೃಷ್ಟಿಸಲು’ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರ ನಿಲುವುಗಳು ವಿಷಪೂರಿತವಾಗಿವೆ ಎಂದೂ ಅವರು ಟೀಕಿಸಿದರು.
ಉವೈಸಿ ಮುಸ್ಲಿಂ ಯುವಕರ ನಾಯಕತ್ವ ಬಲವರ್ಧನೆಯ ಪರವಾಗಿ ಮಾತಾಡುತ್ತಾರೆ. ಆದರೆ ಅವರ ಪಕ್ಷವಾದ ಎಐಎಂಐಎಂ ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದರೂ, ಆ ಪಕ್ಷವು ಅಲ್ಲಿ ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ ಸ್ವಂತ ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿ ಮುಸ್ಲಿಂ ಯುವಕರಿಗೆ ಟಿಕೆಟ್ ನೀಡಲು ಸಿದ್ಧರಾಗದೆ, ಇತರ ರಾಜ್ಯಗಳಿಗೆ ಹೋಗಿ ಇಂತಹ ಜಂಭದ ಮಾತುಗಳನ್ನು ಆಡುವುದೇಕೆ ಎಂದೂ ಶಮಾ ಪ್ರಶ್ನಿಸಿದರು.
ಭಾರತದೊಳಗೆ ಒಂದು ಪಾಕಿಸ್ತಾನವನ್ನು ಸೃಷ್ಟಿಸಲು ಅವರು ಬಯಸುತ್ತಿದ್ದಾರೆ ಎಂದು ತನಗೆ ಅನಿಸುತ್ತಿದೆ. ಅಸದುದ್ದೀನ್ ಉವೈಸಿ ಅಂತಹ ಒಬ್ಬ ವ್ಯಕ್ತಿಯಾಗಿದ್ದಾರೆ. ಅದು ವಿಷಪೂರಿತ ವಿಷಯವಾಗಿದೆ ಎಂದು ಶಮಾ ಮುಹಮ್ಮದ್ ಹೇಳಿದ್ದಾರೆ.
2027ರ ಉತ್ತರಪ್ರದೇಶ ಚುನಾವಣೆಯ ಮೊದಲು ರಾಮ್ಪುರದಲ್ಲಿ ನಡೆದಿದ್ದ ಸಭೆಯಲ್ಲಿ ಉವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಸ್ಲಿಂ ಯುವಕರು ನಾಯಕರಾಗಿ ಬೆಳೆಯಲು ದಮನಿತರಿಗಾಗಿ ನ್ಯಾಯ ಪಡೆಯಲು ತನ್ನ ಪಾರ್ಟಿ ಅವಕಾಶ ಒದಗಿಸುತ್ತದೆ ಎಂದಿದ್ದರು.












