ತ್ರಿವಳಿ ತಲಾಕ್ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ: ಅಸಾಧ್ಯ ಯಶಸ್ಸನ್ನು ಸಾಧ್ಯವಾಗಿಸಿದ ಸದಸ್ಯರು ಯಾರು ಗೊತ್ತೇ?

0
646

ಹೊಸದಿಲ್ಲಿ, ಜು. 31: ಎಷ್ಟೇ ದೊಡ್ಡ ವಿರೋಧ ಮತ್ತು ವಿರೋಧಿಸಿದವರೇ ಮೇಲುಗೈ ಪಡೆದರೂ ಮೋದಿ ಸರಕಾರ ಯಶಸ್ವಿಯಾಗಿ ಸಂಖ್ಯಾ ಬಲ ಆಟದ ಮೂಲಕ ತ್ರಿವಳಿ ತಲಾಕ್ ಮಸೂದೆಯನ್ನು ಪಾಸು ಮಾಡಿಕೊಂಡಿದೆ. ಒಂದೇ ಬಾರಿ ಮೂರು ತಲಾಖ್ ನೀಡುವ ಪುರುಷನನ್ನು ಮೂರು ವರ್ಷ ಜೈಲಿನಲ್ಲಿ ಇರಿಸುವ ಕಾನೂನಿನ ವಿರುದ್ಧ ರಾಜ್ಯ ಸಭೆಯಲ್ಲಿ 84 ಮತ್ತು ಪರ 100 ಮತಗಳು ಬಿದ್ದುವು. ಈ ಹಿಂದೆ ಲೋಕಸಭೆ ಪಾಸು ಮಾಡಿದ್ದ ಮಸೂದೆಗೆ ರಾಷ್ಟ್ರಪತಿ ಸಹಿ ಹಾಕುವುದರೊಂದಿಗೆ ಮುತ್ತಲಾಕ್ ದೇಶದ ಕ್ರಿಮಿನಲ್ ಅಪರಾಧ ಆಗಲಿದೆ. ಮಾಹಿತಿ ಹಕ್ಕು ತಿದ್ದುಪಡಿಯ ನಂತರ ತ್ರಿವಳಿ ತಲಾಕ್ ಮಸೂದೆಗೆ ರಾಜ್ಯಸಭೆಯಲ್ಲಿ ಭಾರೀ ವಿರೋಧವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿದ್ದವು. ಅವೆಲ್ಲವೂ ವಿಫಲವಾಗಿದೆ.

ಎನ್ಡಿಎಯ ಘಟಕ ಪಕ್ಷವಾದ ಜನತಾದಳ ಯು, ಎಐಡಿಎಂಕೆ ಮತದಾನದ ವೇಳೆ ಹೊರ ನಡೆದದ್ದು ಮತ್ತು ಕೇರಳ ಕಾಂಗ್ರೆಸ್ ಎಂ, ಲೋಕ್ ತಾಂತ್ರಿಕ್ ಜನತಾದಳ, ಬಿಎಸ್‍ಪಿ ಸದಸ್ಯರು ಮತ ಹಾಕುವುದರಿಂದ ದೂರ ನಿಂತದ್ದರಿಂದ ತ್ರಿವಳಿ ತಲಾಕ್ ಮಸೂದೆ ಪಾಸು ಆಗಿದೆ. ಜೊತೆಗೆ ಶರದ್ ಯಾದವ್, ಪ್ರಫುಲ್ ಪಟೇಲ್ ,ಸತೀಶ್ ಚಂದ್ರ ಮಿಶ್ರ ಹಾಗೂ ಪ್ರತಿಪಕ್ಷದ ಹಲವು ನಾಯಕರು ಸದನದಲ್ಲಿ ಭಾಗವಹಿಸಿರಲಿಲ್ಲ.