ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶ ವಿರುದ್ಧ ಸಿಬಿಐಗೆ ತನಿಖೆಗೆ ಚೀಫ್ ಜಸ್ಟಿಸ್ ಅನುಮತಿ

0
445

ಹೊಸದಿಲ್ಲಿ, ಜು. 31: ಹೈಕೋರ್ಟಿನ ಜಡ್ಜ್ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ನಡೆಸಲು ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅನುಮತಿ ನೀಡಿದ್ದಾರೆ. ಜಸ್ಟಿಸ್ ಶುಕ್ಲರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಲು ಅನುಮತಿ ದೊರಕಿದ್ದು ಅಲಾಹಾಬಾದ್ ಹೈಕೋರ್ಟಿನ ನ್ಯಾಯಾಧೀಶರಾಗಿರುವ ಎಸ್.ಎನ್.ಶುಕ್ಲ , ಖಾಸಗಿ ಮೆಡಿಕಲ್ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭ್ರಷ್ಟಾಚಾರ ಎಸೆಗಿದ್ದಾರೆ ಎಂದು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿತ್ತು.

ಇದೇ ಮೊದಲ ಬಾರಿ ಸಿಟ್ಟಿಂಗ್ ಜಡ್ಜ್ ವಿರುದ್ಧ ಪ್ರಕರಣವೊಂದರಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಹಾಲಿ ಜಡ್ಜ್ ವಿರುದ್ಧ ತನಿಖೆ ನಡೆಸುವಾಗ ಸುಪ್ರೀಂ ಕೋರ್ಟಿನ ಚೀಫ್ ಜಸ್ಟಿಸ್ ಅನುಮತಿ ಅಗತ್ಯವಿದೆ. ದೀಪಕ್ ಮಿಶ್ರ ಸುಪ್ರೀಂಕೋರ್ಟಿನ ಚೀಫ್ ಜಸ್ಟಿಸ್ ಆಗಿದ್ದಾಗ ಶುಕ್ರರ ವಿರುದ್ಧ ಆರೋಪ ಕೇಳಿಬಂದಿತ್ತು. ಲಕ್ನೊದ ಮೆಡಿಕಲ್ ಕಾಲೇಜೊಂದರ ಪ್ರವೇಶಕ್ಕೆ ಸುಪ್ರೀಂಕೋರ್ಟಿನ ತೀರ್ಪು ಕಡೆಗಣಿಸಿ ಆದೇಶ ಹೊರಡಿಸಿದ ಆರೋಪ ಶುಕ್ಲರ ಮೇಲಿದೆ. ನಂತರ ದೀಪಕ್ ಮಿಶ್ರ ನೇಮಿಸಿದ ಸಮಿತಿ ತನಿಖೆ ನಡೆಸಿತ್ತು. ಆರೋಪ ನಿಜವೆಂದು ಪತ್ತೆಹಚ್ಚಿತ್ತು. ನಂತರ ರಂಜನ್ ಗೊಗೊಯಿ ಚೀಫ್ ಜಸ್ಟಿಸ್ ಸ್ಥಾನಕ್ಕೆ ಬಂದಿದ್ದರು. ಶುಕ್ಲರನ್ನು ಇಂಪೀಚ್‍ಮೆಂಟ್ ಮಾಡಬೇಕೆಂದು ಗೊಗೊಯಿ ಪ್ರಧಾನಿಗೆ ಪತ್ರ ಬರೆದಿದ್ದರು.