ಉಸಾಮಾ ಬಿನ್ ಲಾದೆನ್ ಪುತ್ರ ಹಂಝ ಹತ್ಯೆ: ವರದಿ

0
417

ವಾಷಿಂಗ್ಟನ್, ಆ. 1: ಅಲ್ ಖಾಯಿದ ನಾಯಕ ಉಸಾಮಾನ ಬಿನ್ ಲಾದೆನ್ ಪುತ್ರ ಹಂಝ ಬಿನ್ ಲಾದೆನ್ ಕೊಲ್ಲಲ್ಪಟ್ಟಿದ್ದಾನೆ ಎಂದು ವರದಿಯಾಗಿದೆ ಮೂವರು ಅಮೆರಿಕನ್ ರಕ್ಷಣಾ ಅಧಿಕಾರಿಗಳನ್ನು ಉದ್ಧರಿಸಿ ಎನ್‍ಬಿಸಿ ನ್ಯೂಸ್ ಸುದ್ದಿ ವರದಿ ಮಾಡಿದೆ. ಆದರೆ ಎಲ್ಲಿ ಹಂಝ ಕೊಲ್ಲಲ್ಪಟ್ಟಿದ್ದಾನೆ ಮತ್ತು ಎಂದು ಕೊಲ್ಲಲ್ಪಟ್ಟನು, ಇದರಲ್ಲಿ ಅಮೆರಿಕದ ಪಾತ್ರ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ.

29 ವರ್ಷದ ಹಂಝ ಬಿನ್ ಲಾದೆನ್ ನನ್ನ ಹಿಡಿದು ಕೊಟ್ಟವರಿಗೆ ಹತ್ತು ಲಕ್ಷ ಡಾಲರ್ ಬಹುಮಾನವನ್ನು ಅಮೆರಿಕದ ರಕ್ಷಣಾ ಸಚಿವಾಲಯ ಈ ವರ್ಷ ಫೆಬ್ರುವರಿಯಲ್ಲಿ ಘೋಷಿಸಿತ್ತು. 2018ರಲ್ಲಿ ಹಂಝ ಕೊನೆಯ ಬಹಿರಂಗ ಹೇಳಿಕೆ ನೀಡಿದ್ದನು. ಅದು ಸೌದಿ ಅರೇಬಿಯದ ವಿರುದ್ಧ ಬೆದರಿಕೆ ಮತ್ತು ಕ್ರಾಂತಿಗೆ ಕರೆಯೂ ಆಗಿತ್ತು. ವಲ್ರ್ಡ್ ಟ್ರೇಡ್ ಸೆಂಟರ್ ಧ್ವಂಸದ ಬಳಿಕ ಹಂಝ ಅಲ್‍ಖಾಯಿದಾದ ಪ್ರಧಾನ ಸ್ಥಾನವನ್ನು ವಹಿಸಿಕೊಂಡಿದ್ದನು ಎನ್ನಲಾಗುತ್ತಿದೆ.