ಈದ್: ಬಲಿಮಾಂಸ ಸಂರಕ್ಷಣೆಗೆ ಭೀಮಗಾತ್ರ ಪ್ರಿಡ್ಜ್

0
338

ಜಿದ್ದ, ಆ. 1: ಹಜ್ ಸಂದರ್ಭದಲ್ಲಿ ಬಲಿ ಮಾಂಸವನ್ನು ಸಂರಕ್ಷಿಸಿಡುವ ಸಲುವಾಗಿ ಹೆಚ್ಚು ಶಕ್ತಿಶಾಲಿ ಫ್ರೀಸರ್ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನಲ್ಲೆ ಅತಿ ದೊಡ್ಡ ಫ್ರೀಸರ್ ಇದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಲಿಮಾಂಸ ಯೋಜನೆಯ ಅಡಿಯಲ್ಲಿ ಎತ್ತಿ ತೋರಿಸಬಹುದಾದ ಬೃಹತ್ ಫ್ರೀಸರ್ ಎಂದು ಅಧಿಕಾರಿಗಳು ಹೇಳಿದರು. ಹತ್ತು ಲಕ್ಷಕ್ಕೂ ಹೆಚ್ಚು ಬಲಿಪ್ರಾಣಿಗಳ ಮಾಂಸವನ್ನು ಇದರಲ್ಲಿ ಸಂರಕ್ಷಿಸಿಡಬಹುದಾಗಿದೆ. ಕಂಪ್ಯೂಟರ್ ವ್ಯವಸ್ಥೆಯಲ್ಲಿ ಇದು ಕಾರ್ಯಾಚರಿಸುತ್ತದೆ.

ಈ ಫ್ರಿಡ್ಜ್ ಅನ್ನು ಜಗತ್ತಿನ ವಿವಿಧಡೆಗೆ ಅರ್ಹರಿಗೆ ಮಾಂಸ ತಲುಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಯಾತ್ರಿಕರಿಗೆ ನೀಡಲಾಗುವ ಸೇವೆಯು ಉತ್ಕೃಷ್ಟ ಮಟ್ಟದ್ದನ್ನಾಗಿಸುವ ನಿಟ್ಟಿನಲ್ಲಿ ಬೃಹತ್ ಫ್ರಿಡ್ಜ್ ನಿರ್ಮಾಣವಾಗಿದೆ ಎಂದು ಬಲಿಮಾಂಸ ಯೋಜನೆಯ ವಿಶೇಷ ಮೇಲ್ವಿಚಾರಕ ಡಾ. ಉಮರ್ ಅತಿಯ ಹೇಳಿದರು. ಮುಅಯ್‍ಸಿಮಿನ ಎರಡು, ಮೂರು ನಂಬರ್ ಬಲಿನೀಡುವ ಸ್ಥಳದಲ್ಲಿನ ಅವಶೇಷಗಳನ್ನು ತೆರವು ಗೊಳಿಸುವುದಕ್ಕಾಗಿ ಬೆಲ್ಟ್ ಗಳೂ, ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳನ್ನು ತೆರವುಗೊಳಿಸಿ ಹೊಸದನ್ನು ಸ್ಥಾಪಿಸಲಾಗಿದೆ. ಎರಡು ಬಲಿ ಸ್ಥಳಗಳಲ್ಲಿನ ಫ್ರೀಸರ್ ಗಳನ್ನು ಹೊಸ ವ್ಯವಸ್ಥೆಯೊಂದಿಗೆ ನವೀಕರಿಸಲಾಗಿದೆ. ಎಂದು ಡಾ. ಉಮರ್ ಅತಿಯ ಹೇಳಿದರು.