ಕೇವಲ 6 ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ 1366 ಮಂದಿಯ ಹತ್ಯೆ- ವಿಶ್ವಸಂಸ್ಥೆ

0
355

ಕಾಬೂಲ್, ಆ. 1: ಅಫ್ಘಾನಿಸ್ತಾನದ ಯುದ್ಧದ ದುಷ್ಪರಿಣಾಮದಿಂದಾಗಿ 2019ರ ಮೊದಲ ಆರು ತಿಂಗಳಲ್ಲಿ 1366 ಜನರು ಹತ್ಯೆಯಾಗಿದ್ದಾರೆ. 2,446 ಮಂದಿ ಗಾಯಾಳುಗಳಾಗಿದ್ದಾರೆ ಎಂದು ವಿಶ್ವಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ. ವಿಶ್ವಸಂಸ್ಥೆ ಅಸಿಸ್ಟೆಂಟ್ ಮಿಶನ್ ಇನ್ ಅಫ್ಘಾನಿಸ್ತಾನದ ಅಂಕಿಸಂಖ್ಯೆಯ ಪ್ರಕಾರ 2019ರ ಮೊದಲ ಆರು ತಿಂಗಳಲ್ಲಿ ಹತ್ಯೆಯಾದವರ ಸಂಖ್ಯೆಯಲ್ಲಿ ಶೇ 27ರಷ್ಟು ಕಡಿಮೆಯಾಗಿದ್ದು ಇದು ಒಂದು ದಾಖಲೆಯಾಗಿದೆ.

ಜನವರಿ 30ರಿಂದ ಜೂನ್ 30ರವರೆಗೆ ಹತ್ಯೆಯಾದವರ ಸಂಖ್ಯೆಯಲ್ಲಿ ಕಡಿಮೆ ಕಂಡು ಬಂದಿದೆ. ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ತಾದಾಮಿಚಿ ಯಾಮಮೊಟೊ ನಾಗರಿಕರು ಹತ್ಯೆಯಾಗುವುದು ನಿಲ್ಲಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಜನರ ರಕ್ಷಣೆಯ ಕುರಿತು ಎಲ್ಲ ಸಂಘಟನೆಗಳಿಗೂ ನಾವು ಮನವಿ ಮಾಡುತ್ತಿದ್ದೇವೆ. ನಾಗರಿಕರಿಗಾಗುವ ಹಾನಿಯನ್ನು ತಡೆಯಬೇಕಾಗಿದೆ ಎಂದು ಅವರು ಹೇಳಿದರು.