ತ್ರಿವಳಿ ತಲಾಕ್ ಮಸೂದೆಗೆ ರಾಷ್ಟ್ರಪತಿಯ ಸಹಿ: ಇನ್ನು ತ್ರಿವಳಿ ಹೇಳಿದ ಪತಿಗೆ ಎರಡು ವರ್ಷ ಜೈಲು

0
422

ಹೊಸದಿಲ್ಲಿ, ಆ. 1: ರಾಜ್ಯಸಭೆ ನಿನ್ನೆ ಪಾಸು ಮಾಡಿದ್ದ ತ್ರಿವಳಿ ತಲಾಕ್ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಗೀಕಾರ ನೀಡಿದ್ದಾರೆ. ಇದರೊಂದಿಗೆ ತ್ರಿವಳಿ ತಲಾಕ್ ಹೇಳುವುದು ಕ್ರಿಮಿನಲ್ ಅಪರಾಧ ಆಗಿದ್ದು ಇನ್ನು ತ್ರಿವಳಿ ತಲಾಕ್ ಹೇಳುವ ಪತಿಗೆ ಮೂರುವರ್ಷ ಶಿಕ್ಷೆ ನೀಡುವ ಕಾನೂನು ದೇಶದಲ್ಲಿ ಜಾರಿಗೆ ಬಂದಿದೆ. ಇದರೊಂದಿಗೆ ತ್ರಿವಳಿ ತಲಾಕ್ ಒಂದೇ ಬಾರಿ ಹೇಳಿ ಮದುವೆ ಸಂಬಂಧ ಕಡಿದು ಕೊಂಡರೆ ಮೂರು ವರ್ಷ ಜೈಲಿನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಈ ಹಿಂದೆ ಸುಗ್ರಿವಾಜ್ಞೆಯ ಮೂಲಕ ಮಸೂದೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲಾಗಿತ್ತು. ಈಗ ಅದು ಕಾನೂನು ಆಗಿ ಅಂಗೀಕೃತವಾಗಿದೆ.

ಮುತ್ತಲಾಕ್ ಮಸೂದೆಯನ್ನು ಆಯ್ಕೆ ಸಮಿತಿಗೆ ಬಿಡಬೇಕೆಂದು ಪ್ರತಿಪಕ್ಷಗಳು ತಂದ ತಿದ್ದುಪಡಿ ರಾಜ್ಯಸಭೆಯಲ್ಲಿ ವಿಫಲವಾಗಿತ್ತು. ತಿದ್ದುಪಡಿ ಪರ 84 ಮತಗಳು ಮತ್ತು ವಿರುದ್ಧ 99 ಮತಗಳು ಬಿದ್ದಿದ್ದವು.