ವಿಶ್ವಶಾಂತಿಗೆ ಇಸ್ರೇಲ್ ಗಂಭೀರ ಬೆದರಿಕೆ: ಬ್ರಿಟನ್ನಿನ ನಾಗರಿಕರು

0
14

ಸನ್ಮಾರ್ಗ ವಾರ್ತೆ

ವಿಶ್ವಶಾಂತಿಗೆ ಇಸ್ರೇಲ್ ಗಂಭೀರ ಬೆದರಿಕೆಯಾಗಿದೆ ಎಂದು ಬ್ರಿಟನ್ನಿನ ಐದು ಮಂದಿಯಲ್ಲಿ ನಾಲ್ಕು ಮಂದಿ ಅಥವಾ ಶೇಕಡ 78 ರಷ್ಟು ಮಂದಿ ನಂಬಿದ್ದಾರೆ ಎಂದು ಹೊಸ ಸಮೀಕ್ಷೆ ತಿಳಿಸಿದೆ.

ಬ್ರಿಟನ್ನಿನ ರಾಷ್ಟ್ರೀಯ ಸಾಮಾಜಿಕ ಸಂಶೋಧನಾ ಕೇಂದ್ರವು ನಡೆಸಿದ ಇತ್ತೀಚಿನ ಅಧ್ಯಯನ ಪ್ರಕಾರ ಈ ಮಾಹಿತಿ ಬಹಿರಂಗಕ್ಕೆ ಬಂದಿದೆ. 20 ವರ್ಷಗಳ ಹಿಂದೆ ಕೇವಲ 48 ಶೇಕಡಾದಷ್ಟು ಮಂದಿ ಮಾತ್ರ ಇಸ್ರೇಲ್ ಅನ್ನು ಬೆದರಿಕೆಯಾಗಿ ನೋಡಿದ್ದರು . ಕಳೆದ ವರ್ಷ ಒಂದರಲ್ಲಿಯೇ ಈ ದರವು ಹತ್ತರಷ್ಟು ಹೆಚ್ಚಾಗಿದೆ.

2023 ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ನಡೆಸಿದ ಯುದ್ದವು ಸಾರ್ವಜನಿಕರಲ್ಲಿ ಹೆಚ್ಚಿನ ಕಳವಳವನ್ನು ಉಂಟು ಮಾಡಿದೆ ಎಂದು ವರದಿಯು ಹೇಳಿದೆ. ಇರಾನಿನ ಮೇಲೆ ಇಸ್ರೇಲ್ ನಡೆಸಿದ ಯುದ್ಧವು ಮಧ್ಯಪ್ರಾಚ್ಯದಲ್ಲಿ ಪ್ರಮುಖ ಪ್ರಾದೇಶಿಕ ಯುದ್ಧಕ್ಕೆ ಕಾರಣವಾಗಬಹುದು ಮತ್ತು ಜಾಗತಿಕ ಅಸ್ತಿರತೆಗೆ ಕಾರಣವಾಗಬಹುದು ಎಂದು ಬ್ರಿಟಿಷ್ ನಾಗರಿಕರು ಭಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳಿದೆ.