ಸನ್ಮಾರ್ಗ ವಾರ್ತೆ
ಯು ಎ ಇ ಉಪಾಧ್ಯಕ್ಷ ಮತ್ತು ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ ತೂಮ್ ಅವರು ಗಾಝಾದ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಚಳಿಗಾಲಕ್ಕೆ ಮುಂಚಿತವಾಗಿ ಗಾಝಾದಲ್ಲಿ 50,000 ಜನರಿಗೆ ಆಶ್ರಯ ನೀಡಲು ಟೆಂಟ್ ಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.
ತೀವ್ರ ಚಳಿ ಮತ್ತು ಭಾರಿ ಮಳೆಯಿಂದ ಉಂಟಾಗುವ ಪ್ರವಾಹದಿಂದ ಸ್ಥಳಾಂತರಗೊಂಡ ಗಾಝಾ ನಿವಾಸಿಗಳನ್ನು ರಕ್ಷಿಸುವ ಪ್ರಯತ್ನಗಳ ಒಂದು ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸರಕಾರಿ ಸ್ವಾಮ್ಯದ ವಾಮ್ ಸುದ್ದಿ ಸಂಸ್ಥೆ ತಿಳಿಸಿದೆ












