ಜಿಐಓ ಸ್ಥಾಪನಾ ದಿನ: ಯುವತಿಯರು ಸಮಾಜ ಸುಧಾರಣೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು- ಕರೆ

0
645

ಮಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಜಿಐಓ) ಕರ್ನಾಟಕ ಸ್ಥಾಪನೆಯಾಗಿ ಹತ್ತು ವರ್ಷಗಳಾದ ಹಿನ್ನೆಲೆಯಲ್ಲಿ ಆಗಸ್ಟ್ ೧ರಂದು ಗುಲ್ಬರ್ಗ ಜಿಲ್ಲೆಯ ಜಿಐಓ ಕಚೇರಿಯಾದ ಹಿದಾಯತ್ ಸೆಂಟರ್ ನಲ್ಲಿ ಹಾಗೂ ಮಂಗಳೂರಿನ ಭ್ರೈಟ್ ಮಾಡಲ್ ಶಾಲೆಯ ಹೊರಾಂಗಣದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಸ್ಮರಿಸಲಾಯಿತು.

ಗುಲ್ಬರ್ಗ ಕಾರ್ಯಕ್ರಮದಲ್ಲಿ ಜಿಐಒ ಕರ್ನಾಟಕದ ಮಾಜಿ ಸಲಹಾ ಸಮಿತಿ ಸದಸ್ಯೆ ರಬಿಯ ಖಾನುಮ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು‌. ಮಂಗಳೂರಿನ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಮಹಿಳಾ ವಿಭಾಗದ ಮರಿಯಮ್ ಷಹೀರ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜಿಐಒ ರಾಜ್ಯಾಧ್ಯಕ್ಷೆ ಉಮೈರ ಬಾನು ಧ್ವಜಾರೋಹಣ ನೆರವೇರಿಸಿದರು.

ಸಮಾಜದ ಸುಧಾರಣೆಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡುವ ಯುವತಿಯರು ನಾವಾಗಬೇಕು ಎಂದು ಅತಿಥಿಗಳು ಕರೆಕೊಟ್ಟರು.