ಶೀತಲ ಯುದ್ಧ ಕಾಲದ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ; ಇದು ಅಣ್ವಸ್ತ್ರ ಪೈಪೋಟಿಗೆ ದಾರಿ ತೆರೆಯುವುದೇ?

0
557

ವಾಷಿಂಗ್ಟನ್, ಆ. 2: ಆಯುಧ ಸ್ಪರ್ಧೆಯ ಕುರಿತ ಬೆದರಿಕೆಯ ಕಾರಣದಿಂದ ರಷ್ಯದೊಂದಿಗೆ ಮಾಡಿಕೊಳ್ಳಲಾಗಿದ್ದ ಐಎನ್‍ಎಫ್ ಒಪ್ಪಂದದಿಂದ ಅಮರಿಕ ಹಿಂದೆ ಸರಿದಿದೆ. ರಾಷ್ಟ್ರ ಸುರಕ್ಷೆಯ ಹಿತಕ್ಕೆ ಇದು ಪೂರಕವಾಗಿಲ್ಲ ಎಂದು ಹೇಳಿ ಅಣ್ವಸ್ತ್ರ ನಿಯಂತ್ರಣ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ.

ಮಧ್ಯದೂರ ಅಣುಶಕ್ತಿ ಒಪ್ಪಂದವಾದ ಐಎನ್‍ಎಫ್ ಒಪ್ಪಂದವನ್ನು 1987ರಲ್ಲಿ ಅಮೆರಿಕ ಅಧ್ಯಕ್ಷ ರೊನಾಲ್ಡ್ ರೇಗನ್ ಮತ್ತು ಸೋವಿಯತ್ ನಾಯಕ ಮಿಖಾಯೇಲ್ ಗೊರ್ಬಚೋಪ್ ಮಾಡಿಕೊಂಡಿದ್ದರು. 500ರಿಂದ 5,500 ಕಿಲೊಮೀಟರ್ ವ್ಯಾಪ್ತಿಯ ಮಿಸೈಲುಗಳನ್ನು ಈ ಒಪ್ಪಂದದಲ್ಲಿ ನಿಷೇಧಿಸಲಾಗಿತ್ತು. ರಷ್ಯ 9ಎಂ729 ಮಿಸೈಲ್ ಅಭಿವೃದ್ಧಿಪಡಿಸಿ ಒಪ್ಪಂದ ಉಲ್ಲಂಘಿಸಿದೆ ಎಂದು ಅಮೆರಿಕ ಮತ್ತು ನ್ಯಾಟೊ ಆರೋಪಿಸಿತ್ತು. ಆದರೆ ಇದನ್ನು ರಷ್ಯ ನಿರಾಕರಿಸಿತ್ತು. ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಅಮರಿಕ ಹೇಳಿಕೊಂಡಿತ್ತು. ರಷ್ಯ ತಮ್ಮ ಆಗ್ರಹಕ್ಕೆ ಮಣಿಯದಿದ್ದರೆ ಆಗಸ್ಟ್ ನಲ್ಲಿ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಫೆಬ್ರುವರಿಯಲ್ಲಿ ಟ್ರಂಪ್ ಮುನ್ನೆಚ್ಚರಿಕೆ ನೀಡಿದ್ದರು.