ವಿಶ್ವದ ಟಾಪ್ 100 ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿ ಭಾರತದ 92 ನಗರಗಳು: ಅಧ್ಯಯನ ವರದಿ

0
5

ಸನ್ಮಾರ್ಗ ವಾರ್ತೆ

ನವದೆಹಲಿ: ಉತ್ತರ ಭಾರತದಲ್ಲಿ ಚಳಿಗಾಲದ ಆರಂಭದೊಂದಿಗೆ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಡುತ್ತಿದೆ. aqi.in ವರದಿಯ ಪ್ರಕಾರ, ನವೆಂಬರ್ 20 ರಂದು ವಿಶ್ವದ 100 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 92 ನಗರಗಳು ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ಲುಧಿಯಾನ ಮೊದಲ ಸ್ಥಾನದಲ್ಲಿದ್ದು, ಅಮೃತಸರ, ಶ್ರೀನಗರ, ಸೋನಿಪತ್, ರೇವಾರಿ, ನವದೆಹಲಿ, ಹಿಸಾರ್ ಮತ್ತು ಜೌನ್‌ಪುರ ನಗರಗಳೂ ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಹೊರಗಿನ ವಿಷಕಾರಿ ಹೊಗೆ ಮತ್ತು ಧೂಳಿನಿಂದ ಪಾರಾಗಲು ಜನರು ಮನೆಯೊಳಗೇ ಇರಲು ಬಯಸುತ್ತಾರೆ ಎನ್ನಲಾಗಿದೆ.