ತ್ರಿವಳಿ ತಲಾಕ್ ಕಾನೂನು ವಿರುದ್ಧ ಸುಪ್ರೀಂಕೋರ್ಟಿನ ಬಾಗಿಲು ತಟ್ಟಿದ ಸಮಸ್ತ ಕೇರಳ ಜಮ್ ಇಯ್ಯತ್ತುಲ್ ಉಲಮಾ

0
1344

ಕಲ್ಲಿಕೋಟೆ, ಆ. 3: ತ್ರಿವಳಿ ತಲಾಕ್ ನೀಡುವುದನ್ನು ಕ್ರಿಮಿನಲ್ ಅಪರಾಧವೆಂದು ಹೇಳುವ ಮಸೂದೆಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಇದಕ್ಕೆ ಭಾರತದ ರಾಷ್ಟ್ರಪತಿ ಅಂಗೀಕಾರ ನೀಡಿದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಸಮಸ್ತ ಕೇರಳ ಜಮ್ ಇಯ್ಯತ್ತುಲ್ ಉಲಮಾವು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಸಮಸ್ತದ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಪರ ಅಡ್ವೊಕೇಟ್ ಝುಲ್ಫಿಕರ್ ಅಲಿ ಅರ್ಜಿ ಸಲ್ಲಿಸಿದ್ದಾರೆ.

ಆರ್ಟಿಕಲ್ 14, 15, 21, 25ರ ಪ್ರಕಾರ ಭಾರತದ ಸಂವಿಧಾನ ದೇಶದ ಪ್ರಜೆಗಳಿಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯವನ್ನು ಸಂರಕ್ಷಿಸಬೇಕು ಮುಂತಾದ ಮೂಲಭೂತ ಹಕ್ಕುಗಳನ್ನು ಕೇಂದ್ರ ಸರಕಾರ ತ್ರಿವಳಿ ತಲಾಕ್ ಕಾನೂನು ಮೂಲಕ ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಸಮಸ್ತ ವಾದಿಸಿದೆ.

ಈ ಹಿಂದಿನ ಎರಡು ಸಲದ ಸುಗ್ರೀವಾಜ್ಞೆಯ ವಿರುದ್ಧ ಕೂಡ ಸಮಸ್ತ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಹಾಕಿತ್ತು. ಮಾತ್ರವಲ್ಲ ಸಮಸ್ತದ ಅಧೀನದ ಯುವಜನ ವಿಭಾಗವಾದ ಎಸ್‍ವೈಎಸ್ ಹತ್ತು ಲಕ್ಷ ಸಹಿಗಳನ್ನು ಸಂಗ್ರಹಿಸಿ ಭಾರತದ ರಾಷ್ಟ್ರಪತಿಗೆ ಕಳುಹಿಸಿಸಿಕೊಟ್ಟಿತ್ತು.

ಈ ಬಾರಿ ಸಮಸ್ತಕ್ಕಾಗಿ ಹಿರಿಯ ವಕೀಲರದ ಕಪಿಲ್ ಸಿಬಲ್, ಸಲ್ಮಾನ್ ಖುರ್ಷಿದ್, ಝುಲ್ಪಿಕರ್ ಅಲಿ, ಮುಹಮ್ಮದ್ ತಯ್ಯಿಬ್ ಹುದವಿ ಮುಂತಾದವರು ಸುಪ್ರೀಂಕೋರ್ಟಿನಲ್ಲಿ ಹಾಜರಾಗಲಿರುವರು.