ಸರಕು ಹಡಗಿನಲ್ಲಿ ಅನಧಿಕೃತವಾಗಿ ಭಾರತಕ್ಕೆ ಬಂದ ಮಾಲಿದ್ವೀಪದ ಮಾಜಿ ಉಪಾಧ್ಯಕ್ಷ: ಮರಳಿ ಕಳುಹಿಸಿಕೊಟ್ಟ ಭಾರತ

0
505

ಹೊಸದಿಲ್ಲಿ, ಆ. 3: ಅನಧಿಕೃತವಾಗಿ ತಮಿಳ್ನಾಡಿನ ತೂತ್ತುಕುಡಿಗೆ ಬಂದಿದ್ದ ಮಾಲಿ ದ್ವೀಪದ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಅದೀಪ್ ಅಬ್ದುಲ್ ಗಫೂರ್ ರನ್ನು ಪೊಲೀಸರು ಸೆರೆಹಿಡಿದು ಮಾಲಿ ದ್ವೀಪಕ್ಕೆ ಕಳುಹಿಸಿದ್ದಾರೆ. ಗುರುವಾರ ಒಂದು ಸರಕು ಹಡಗಿನಲ್ಲಿ ಗಫೂರ್ ಭಾರತಕ್ಕೆ ಬಂದಿದ್ದರು. ಭಾರತದ ಕಾಸ್ಟ್ ಗಾರ್ಡ್ ಮತ್ತು ತಮಿಳ್ನಾಡು ಪೊಲೀಸರು ಗಫೂರ್ ರನ್ನು ವಶಕ್ಕೆ ಪಡೆದಿದ್ದರು.

ಭಾರತದಲ್ಲಿ ರಾಜಕೀಯ ಆಶ್ರಯ ಪಡೆಯುವ ಉದ್ದೇಶದಿಂದ ಅಹ್ಮದ್ ಅದೀಪ್ ಭಾರತಕ್ಕೆ ಬಂದಿದ್ದರು. ಮಾಲಿ ದ್ವೀಪದಲ್ಲಿ ಜೀವ ಭಯವಿದೆ ಎಂದು ಅಹ್ಮದ್ ಅದೀಪ್ ಹೇಳುತ್ತಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಮಾಲಿ ದ್ವೀಪದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ವೇಳೆ ಅವರು ಭಾರತಕ್ಕೆ ಪರಾರಿಯಾಗಿದ್ದಾರೆ. ಮಾಲಿದ್ವೀಪದಲ್ಲಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು ಎಂದು ವರದಿಯಿದೆ.
ಭಾರತಕ್ಕೆ ಬರಲು ಸೂಕ್ತ ಪ್ರಯಾಣ ದಾಖಲೆಗಳು ಅಗತ್ಯವಿದೆ. ಇದು ಯಾವುದೂ ಇಲ್ಲದೆ ತಪ್ಪಾದ ರೀತಿಯಲ್ಲಿ ಅದೀಫ್ ಭಾರತಕ್ಕೆ ಬಂದಿದ್ದರು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿದೇಶ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ