90 ದಿನಗಳ ಒಳಗೆ ಬಾಬರಿ ತೀರ್ಪು ಹೊರಬೀಳುವುದೇ? ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಸುಳಿವು

0
514

ಹೊಸದಿಲ್ಲಿ, ಆ. 9: ತಾನು ನಿವೃತ್ತನಾಗಳು ಸುಮಾರು 90 ದಿನಗಳಿದ್ದು ಅದರ ಮೊದಲು ಬಾಬರಿ ಜಮೀನು ವಿವಾದದಲ್ಲಿ ತೀರ್ಪು ನೀಡುವ ಸೂಚನೆಯನ್ನು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ನೀಡಿದ್ದಾರೆ.. ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಐದು ಕೆಲಸದ ದಿನಗಳಲ್ಲಿ ಐವರು ಸದಸ್ಯರ ಸಂವಿಧಾನ ಪೀಠದ ನ್ಯಾಯಾಧೀಶರು ಬೇರೆ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಚೀಫ್ ಜಸ್ಟಿಸ್ ಗುರುವಾರ ಕೋರ್ಟು ಕಲಾಪ ಮುಗಿಯುವ ಮೊದಲು ತಿಳಿಸಿದರು.

ಸೋಮವಾರ, ಶುಕ್ರವಾರ ಹೊಸ ಅರ್ಜಿಗಳನ್ನು ಮತ್ತು ಹಳೆ ವಿಷಯಗಳ ಇತರ ಅರ್ಜಿಗಳನ್ನು ಪರಿಗಣಿಸುವುದನ್ನು ಕೈಬಿಡಲಾಗಿದೆ. ಪ್ರಕರಣದಲ್ಲಿ ಕೋರ್ಟು ಕಕ್ಷಿಯನ್ನಾಗಿಸಿದ ರಾಮ ವಿಗ್ರಹಕ್ಕಾಗಿ ಹಾಜರಾದ ಸುಪ್ರೀಂಕೋರ್ಟಿನ ಹಿರಿಯ ವಕೀಲ ಅಡ್ವೊಕೇಟ್ ಪರಾಶರನ್ ವಿಗ್ರಹ ದೇವನು ಮಾತ್ರವಲ್ಲ ಆರಾಧಿಸುವ ಸ್ಥಳವೂ ಕಾನೂನು ರಕಕ್ಷಣೆಯಿರುವ ವ್ಯಕ್ತಿಯಾಗಿ ಪರಿಗಣಿಸಬೇಕೆಂದು ವಾದಿಸಿದರು. ರಾಮ ವಿಗ್ರಹ ಮಾತ್ರವಲ್ಲ, ರಾಮ ಜನ್ಮಸ್ಥಳ ಯಾವನೇ ಪ್ರಜೆಯಂತೆ ಕಾನೂನು ರಕ್ಷೆಯಿರುವ ವ್ಯಕ್ತಿಯೆನ್ನುವ ವಾದದದ ಕುರಿತು ಜಸ್ಟಿಸ್ ಡಿವೈ ಚಂದ್ರ ಚೂಡರ ಪ್ರಶ್ನೆಗೆ ಪರಾಶರನ್ ಮೇಲಿನಂತೆ ಉತ್ತರಿಸಿದರು.

ನದಿಗಳು ಆರಾಧಿಸಲ್ಪಡುತ್ತವೆ. ಋಗ್ವೇದ ಪ್ರಕಾರ ಸೂರ್ಯನು ದೇವನು ಆಗಿದ್ದಾನೆ ಎಂದು ಪರಾಶರನ್ ವಾದಿಸಿದರು. ಸೂರ್ಯ ವಿಗ್ರಹ ಅಲ್ಲದಿದ್ದರೂ ದೇವನೇ. ಆ ನೆಲೆಯಲ್ಲಿ ಸೂರ್ಯನಿಗೂ ಕಾನೂನಿನ ರಕ್ಷಣೆಯಿರುವ ವ್ಯಕ್ತಿಯೆಂದು ಹೇಳಬಹುದು. ಪರಾಶರನ್‍ರ ವಾದವನ್ನು ಬೆಂಬಲಿಸಿದ ಜಸ್ಟಿಸ್ ಎಸ್‍ಐ ಬೊಬ್ಡೆ ನದಿಗೆ ಕಾನೂನು ರಕ್ಷಣೆಯಿರುವ ವ್ಯಕ್ತಿಯೆಂದು ಉತ್ತರಖಂಡ ಹೈಕೋರ್ಟು ಇತ್ತೀಚೆಗೆ ತೀರ್ಪು ಹೊರಡಿಸಿತ್ತು ಎಂದು ಹೇಳಿದರು.

ಹಿಂದೂ ಧರ್ಮದಲ್ಲಿ ವಿಗ್ರಹಗಳಿರುವ ಮಂದಿರದಂತೆ ಕೆಲವು ಮಂದಿರಗಳ ಶಿವನ ಬದಲು ಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ ಎಂದು ಪರಾಶರನ್ ಹೇಳಿದರು. 1949ರಲ್ಲಿ ವಿವಾದ ಸ್ಥಳದಲ್ಲಿ ರಾಮ ವಿಗ್ರಹ ತಂದು ಹಾಕಿದ್ದು ತಪ್ಪೇ ಎನ್ನುವ ವಿಷಯದಲ್ಲಿ ಅಭಿಪ್ರಾಯ ತಿಳಿಸಬೇಕೆಂದು ಪರಾಶರನ್‍ರನ್ನು ಚಿಫ್ ಜಸ್ಟಿಸ್ ರಂಜಿತ್ ಗೊಗೊಯಿ ಕೇಳಿದರು. ಪರಾಶರನ್‍ರ ವಾದ ಇಂದೂ ಮುಂದುವರಿಯಲಿದೆ.