ಪ್ರೆಸ್ ಕೌನ್ಸಿಲ್‍ಗೆ ಬಿಜೆಪಿ ಸಂಸದನನ್ನು ನಾಮನಿರ್ದೇಶನ ಮಾಡಿದ ಉಪರಾಷ್ಟ್ರತಿ

0
572

ಹೊಸದಿಲ್ಲಿ, ಆ. 9: ಬಿಜೆಪಿ ಸಂಸದ ರಾಕೇಶ್ ಸಿನ್ಹಾರನ್ನು ಪ್ರೆಸ್ ಕೌನ್ಸಿಲ್ ನ ಸದಸ್ಯನಾಗಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ನಾಮನಿರ್ದೇಶನ ಮಾಡಿದ್ದಾರೆ. ಎರಡು ಸ್ಥಾನಕ್ಕೆ ಸಂಬಂಧಿಸಿದ ಪಾರ್ಲಿಮೆಂಟ್ ಜಂಟಿ ಸಮಿತಿಗೆ ಐವರು ರಾಜ್ಯಸಭಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಮಹೇಶ್ ಪೊದ್ದಾರ್ (ಬಿಜೆಪಿ), ಕೆ. ಕೇಶವರಾವ್ (ಟಿಆರ್‍ಎಸ್), ವಿಜಯಸಾಯ್ ರೆಡ್ಡಿ (ವೈಎಸ್ ಆರ್ ಕಾಂಗ್ರೆಸ್ ), ದೊಲಸೇನ್ (ಟಿಎಂಸಿ), ಸಸ್ಮತ್ ಪಾತ್ರ (ಬಿಜೆಡಿ) ಆಯ್ಕೆಯಾದ ಇತರ ರಾಜ್ಯಸಭಾ ಸದಸ್ಯರು. ಈ ಸಮಿತಿಯಲ್ಲಿ ಹತ್ತು ಮಂದಿ ಲೋಕಸಭಾ ಸದಸ್ಯರು ಮತ್ತು ಐವರು ರಾಜ್ಯಸಭಾ ಸದಸ್ಯರ ಸಹಿತ ಹದಿನೈದು ಮಂದಿ ಸದಸ್ಯರಿದ್ದಾರೆ.