ಮೂರು ಸೇನಾ ವಿಭಾಗಗಳಿಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಸ್ಥಾಪನೆ- ಪ್ರಧಾನಿ ಘೋಷಣೆ

0
545

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 15: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತಾಡಿದ್ದು ಮೂರು ಸೇನೆಯ ಪ್ರಮುಖನಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ಸ್ಥಾನವನ್ನು ಸೃಜಿಸುವುದಾಗಿ ಹೇಳಿದ್ದಾರೆ. 73ನೇ ಸ್ವಾತಂತ್ರ್ಯೋತ್ಸವ ಆಚರಣೆಯ ದಿವಸ ಕೆಂಪುಕೋಟೆಯಿಂದ ಅವರು ಈ ಮಹತ್ವ ಪೂರ್ಣ ಘೋಷಣೆ ಹೊರಡಿಸಿದ್ದಾರೆ. ಸಿಡಿಎಸ್ ಸೇನೆಯ ಮೂರು ವಿಭಾಗಗಳ ನಡುವೆ ಹೊಂದಾಣಿಕೆಯನ್ನು ದೃಢಪಡಿಸಲಿದ್ದಾರೆ ಮತ್ತು ಅವುಗಳಿಗೆ ಪ್ರಭಾವಿ ನೇತೃತ್ವ ನೀಡಲಾಗುವುದು. ನಮ್ಮ ಸರಕಾರವು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯನ್ನು ಸೃಜಿಸಲು ನಿರ್ಧರಿಸಿದೆ ಎಂದು ಮೋದಿ ಹೇಳಿದರು.

1999ರ ಕಾರ್ಗಿಲ್ ಯುದ್ಧದ ಬಳಿಕ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಕೊರತೆಯನ್ನು ಪತ್ತೆಹಚ್ಚಲು ಸ್ಥಾಪಿಸಲಾದ ಉನ್ನತ ಮಟ್ಟದ ಸಮಿತಿ ಚೀಫ್ ಸ್ಟಾಫ್ ಆಫ್ ಡಿಫೆನ್ಸ್ ಸ್ಥಾನವನ್ನು ಸೃಜಿಸಲು ಶಿಫಾರಸ್ಸು ಮಾಡಿತ್ತು. ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಅಗತ್ಯ ಸುಧಾರಣೆಯನ್ನು ವಿಶ್ಲೇಷಣೆ ಮಾಡುವ ಸಚಿವರ ಸಮೂಹ ಕೂಡ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ನಿಯೋಜಿಸಲು ಸಲಹೆ ನೀಡಿತ್ತು.

2012ರಲ್ಲಿ ನರೇಂದ್ರ ಚಂದ್ರ ಟಾಸ್ಕ್ ಪೋಸ್ ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಸ್ಥಾಯಿ ಪ್ರಮುಖ ಸ್ಥಾನವನ್ನು ಸೃಜಿಸಲು ಸೂಚಿಸಿತ್ತು. ಚೀಫ್ಸ್ ಆಫ್ ಸ್ಟಾಫ್ ಕಮಿಟಿಯಲ್ಲಿ ಸೇನೆ,  ನೌಕಾಸೇನೆ,  ವಾಯುಸೇನೆಯ ಪ್ರಮುಖರು ಇರುತ್ತಾರೆ ಹಾಗೂ ಇವರಿಗಿಂತ ಹಿರಿಯ ವ್ಯಕ್ತಿ ಇದರ ಪ್ರಮುಖರಾಗಿರುತ್ತಾರೆ ಎಂದು ಮೋದಿ ತಿಳಿಸಿದರು.