ಪಾಲನ್ಪುರ್,ಆ. 15: ಕಸ್ಟಡಿ ಸಾವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ರ ಭೇಟಿಗೆ ಗುಜರಾತಿನ ಪಾಲನ್ಪುರ ಜೈಲಿಗೆ ಹೊರಟ ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ ಮತ್ತು ಇಬ್ಬರು ಶಾಸಕರನ್ನು ಮತ್ತು ಅವರ ಜೊತೆಯಿದ್ದ 27 ಮಂದಿಯನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದು, ಕಾನೂನು ವ್ಯವಸ್ಥೆ ಸಮಸ್ಯೆಯಾಗಲಿದೆ ಎಂದು ಬನಸ್ಕಾಂತ ಪೊಲೀಸ್ ಸುಪರೀಡೆಂಟ್ ಪ್ರದೀಪ್ ಶೆಜುಲ್ ಹೇಳಿದ್ದಾರೆ.
ಪಟಾನ್,ಪಾಲನ್ಪುರ ಶಾಸಕರಾಗಿರುವ ಕಿರತ್ ಪಟೇಲ್, ಮಹೇಶ್ ಪಟೇಲ್ರನ್ನು ಪೊಲೀಸರು ತಡೆದಿರಿಸಿದ್ದಾರೆ. ಸಂಜಯ್ ಭಟ್ರಿಗೆ ಬೆಂಬಲ ಘೋಷಿಸಿ ಅವರಿಗೆ ರಾಖಿ ಕಟ್ಟಲು ಹಲವಾರು ಮಂದಿ ಬುಧವಾರ ಜೈಲಿಗೆ ಹೊರಟಿದ್ದರು. ಭಟ್ರ ಪತ್ನಿ ಶ್ವೇತಾ ಭಟ್ ಕೂಡ ಇವರ ಜೊತೆಗಿದ್ದರು.
ಇವರ ಜೊತೆ ಭಟ್ರನ್ನು ಭೇಟಿಯಾಗಲು ತಾನು ಕೂಡ ಹೋಗುವೆ ಎಂದು ಹಾರ್ದಿಕ್ ಪಟೇಲ್ ತಿಳಿಸಿದ್ದರು. ಆದರೆ ಕುಟುಂಬ ಸದಸ್ಯೆಯಾದ್ದರಿಂದ ಶ್ವೇತಾರಿಗೆ ಜೈಲಿನಲ್ಲಿ ಭಟ್ರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು. 1990ರಲ್ಲಿ ಜಾಮ್ನಗರದಲ್ಲಿ ಅಡಿಷನಲ್ ಪೊಲೀಸ್ ಸೂಪರಿಡೆಂಟ್ ಆಗಿದ್ದಾಗ ನಡೆದ ಕಸ್ಟಡಿ ಸಾವು ಪ್ರಕರಣದಲ್ಲಿ ಸಂಜೀವ್ ಭಟ್ರಿಗೆ ಜೂನ್ನಲ್ಲಿ ಕೋರ್ಟು ಜೀವಾವಧಿ ಶಿಕ್ಷೆ ನೀಡಿ ತೀರ್ಪಿತ್ತಿತ್ತು. 2018 ಸೆಪ್ಟಂಬರ್ ಐದರಂದು ಓರ್ವರನ್ನು ವೃಥಾ ಮಾದಕವಸ್ತು ಪ್ರಕರಣದಲ್ಲಿ ಸಿಕ್ಕಿಸಿಹಾಕಿದ್ದಾರೆಂದು ಭಟ್ ವಿರುದ್ಧ ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ.












