ಪ್ರಸಿದ್ಧ ಹೆರ್ಸೆಯ ಚಾಕಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ

0
263

ಸನ್ಮಾರ್ಗ ವಾರ್ತೆ

ಮುಂಬೈಯ ಡಾಕ್ಟರ್ ಕೋನ್ ಐಸ್ ಕ್ರೀಮ್ ತಿನ್ನುತ್ತಿರುವಾಗ ಮಾನವ ಬೆರಳಿನ ತುಂಡು ಸಿಕ್ಕಿರುವ ಸುದ್ದಿ ಈಗಾಗಲೇ ನಿಮಗೆ ಗೊತ್ತಿರಬಹುದು. ಇದರ ಬೆನ್ನಿಗೆ ಇದೀಗ ದಂಗುಬಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದೆ.

ಜಾಗತಿಕವಾಗಿಯೇ ಪ್ರಸಿದ್ಧವಾಗಿರುವ ಚಾಕಲೇಟ್ ಕಂಪನಿ ಯಾದ ಹೆರ್ಸೆಯ ಚಾಕಲೇಟ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಸಿಕ್ಕಿರುವುದು ಮತ್ತೊಮ್ಮೆ ಚರ್ಚೆಯನ್ನು ಹುಟ್ಟು ಹಾಕಿದೆ.

ಪ್ರಮಿ ಶ್ರೀಧರ್ ಎಂಬ ಯುವತಿ ಅದರ ಚಿತ್ರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೋ ಮೂಲಕ ಆರ್ಡರ್ ಮಾಡಿದ ಸಿರಪ್ಪಿನಲ್ಲಿ ಇಲಿ ಪತ್ತೆಯಾಗಿದೆ ಎಂದು ಯುವತಿ ಹೇಳಿದ್ದಾರೆ. ತನ್ನ ಕುಟುಂಬದ ಮೂವರು ಈ ಸಿರಪ್ಪನ್ನು ಬಳಸಿದ್ದಾರೆ ಮತ್ತು ಒಬ್ಬರು ವೈದ್ಯರ ಸಲಹೆ ಪಡೆದಿದ್ದಾರೆ ಎಂದು ಯುವತಿ ಹೇಳಿದ್ದಾರೆ.

https://www.instagram.com/reel/C7hb-SdvtjS/?igsh=MWVuaGt3NHNramlmYQ==