ಎ.ಜಿ. ನೂರಾನಿ: ನ್ಯಾಯದ ಕಾವಲುಗಾರನಾದ ಬಹುಮುಖ ಪ್ರತಿಭೆ

0
21

ಸನ್ಮಾರ್ಗ ವಾರ್ತೆ

✍️ ಪಿ.ಕೆ. ನಿಯಾಝ್

ತನ್ನ ತೊಂಬತ್ತ ನಾಲ್ಕನೇ ವಯಸ್ಸಿ ನಲ್ಲಿ ದೇವನ ಕರೆಗೆ ಓಗೊಟ್ಟು ಮರಳುವಾಗ ಎ.ಜಿ. ನೂರಾನಿ ಹೋರಾಟದಲ್ಲಿದ್ದರು. ಹಿಂದುತ್ವ ಶಕ್ತಿಗಳಿಗೆ ಶರಣಾಗಿ ಬಾಬರಿ ಮಸೀದಿಯ ಭೂಮಿಯನ್ನು ರಾಮಮಂದಿರಕ್ಕೆ ಬಿಟ್ಟು ಕೊಟ್ಟ ಸುಪ್ರೀಮ್ ಕೋರ್ಟ್‌ನ ತೀರ್ಪಿನ ಕುರಿತು ಹೊಸ ಪುಸ್ತಕದ ಕೆಲಸದಲ್ಲಿ ಮಗ್ನನಾಗಿದ್ದ ಸಂದರ್ಭದಲ್ಲಿ ಅವರು ವಿದಾಯ ಕೋರಿದರು.

2003ರಲ್ಲಿ ಎರಡು ಸಂಪುಟಗಳೊಂದಿಗೆ ಪ್ರಕಟಿಸಿದ ‘ದ ಬಾಬರಿ ಮಸ್ಜಿದ್ ಕ್ವಶ್ಚನ್ 1520-2003’ ಎಂಬ ಗ್ರಂಥ ಕರ್ತೃ ಆಗಿದ್ದ ನೂರಾನಿಯವರ ಅಭಿಪ್ರಾಯದಂತೆ ಅದು ಭಾರತದ ಜಾತ್ಯತೀತತೆಗೆ ಬಲವಾದ ಪೆಟ್ಟುಕೊಟ್ಟ ತೀರ್ಪಾಗಿತ್ತು.

ಕಾನೂನು ತಜ್ಞ, ವಿದ್ವಾಂಸ, ಇತಿಹಾಸಕಾರ, ರಾಜಕೀಯ ತಂತ್ರಜ್ಞ ಮೊದಲಾದ ವಿವಿಧ ರಂಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ ಪ್ರತಿಭಾವಂತ ವ್ಯಕ್ತಿಯಾಗಿದ್ದರು ಅಬ್ದುಲ್ ಗಫೂರ್ ಮಜೀದ್ ನೂರಾನಿ ಎಂಬ ಹೆಸರಿನ ಎ.ಜಿ. ನೂರಾನಿ. ಪರಿಚಿತ ವಲಯಗಳಲ್ಲಿ ಗಫೂರ್ ಭಾಯಿ ಎಂದು ಕರೆಯಲ್ಪಟ್ಟ ನೂರಾನಿ ಭಾರತದ ಶ್ರೇಷ್ಠ ವಕೀಲರಲ್ಲೊಬ್ಬರೂ, ಸಂವಿಧಾನ ತಜ್ಞರೂ ಆಗಿದ್ದರು. ಇತಿಹಾಸ ತಜ್ಞರಲ್ಲದಿದ್ದರೂ ಅವರು ಹೊರತಂದ ಐತಿಹಾಸಿಕ ಸತ್ಯಗಳು, ಸಂಶೋಧನೆಗಳು ಪತ್ರಕರ್ತರಿಗೆ ಉತ್ತಮ ರೆಫರೆನ್ಸ್ ಗಳಾಗಿದ್ದವು.

ಮುಂಬೈ ಹೈಕೋರ್ಟ್ ಹಾಗೂ ಸುಪ್ರೀಮ್ ಕೋರ್ಟ್‌ನಲ್ಲಿ ಉನ್ನತ ವಕೀಲರಾಗಿ ಸೇವೆ ಸಲ್ಲಿಸಿದ ನೂರಾನಿ ಗಮನ ಸೆಳೆಯಲ್ಪಡುವುದು ಕಾನೂನು ಮತ್ತು ರಾಜಕೀಯ ಸಂಬಂಧಿಸಿದ ವಿಷಯಗಳಲ್ಲಿ ಆಗಿತ್ತು. ಹಿಂದುಸ್ತಾನ್ ಟೈಮ್ಸ್, ದಿ ಹಿಂದೂ, ಫ್ರಂಟ್‌ಲೈನ್, ಎಕೊನೋಮಿಕ್ಸ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಅವರ ಲೇಖನಗಳು ಸಮಗ್ರ ಮತ್ತು ಸಂಶೋಧನೆಯ ಸ್ವರೂಪದಲ್ಲಾಗಿದ್ದವು. ಎಂಬತ್ತರ ದಶಕದಲ್ಲಿ ಅವರು ಫ್ರಂಟ್‌ಲೈನ್‌ನಲ್ಲಿ ಅಂಕಣವನ್ನು ನಿರ್ವಹಿಸಲಾರಂಭಿಸಿದಾಗಿನಿಂದ ಗಮನಿಸಲ್ಪಟ್ಟರು. ಸಂವಿಧಾನಕ್ಕೆ ಸಂಬಂಧಿಸಿದಂತೆ ಫ್ರಂಟ್‌ಲೈನ್, ಸ್ಟೇಟ್‌ಮನ್ ಸೇರಿದಂತೆ ಮಾಧ್ಯಮಗಳಲ್ಲಿ ಬರೆದ ಅಂಕಣಗಳನ್ನು ಸಂಗ್ರಹಿಸಿ ಅoಟಿsಣiಣuಣioಟಿಚಿಟ quesಣioಟಿs iಟಿ Iಟಿಜiಚಿ ಎಂಬ ಹೆಸರಿನಲ್ಲಿ 2002ರಲ್ಲಿ ಪುಸ್ತಕ ಪ್ರಕಟಿಸಲಾಗಿದೆ. ಸಂವಿಧಾನಕ್ಕೆ ಸಂಬಂಧಿಸಿದ ವಿಷಯದಲ್ಲಿ ಅಗ್ರಗಣ್ಯರಾಗಿದ್ದ ನೂರಾನಿಯವರ ಕೆಲವು ವಿಶ್ಲೇಷಣೆಗಳನ್ನು ಹಲವು ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕ್ಷಣಮಾತ್ರದಲ್ಲಿ ತೆಗೆದು ತೋರಿಸುವ ನೂರಾನಿಯವರ ಸಾಮರ್ಥ್ಯವನ್ನು ‘ದಿ ಹಿಂದೂ’ ಪತ್ರಿಕೆಯ ಮುಖ್ಯ ಸಂಪಾದಕರಾದ ಎನ್. ರಾಮ್ ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದರು. ಚೆನ್ನೈಯ ತನ್ನ ಸುಸಜ್ಜಿತ ಸಂಪಾದಕೀಯ ಕಚೇರಿಗೂ ಸಿಗದಂತಹ ನಿಖರ ದಾಖಲೆಗಳನ್ನು ನೂರಾನಿ ನಿಮಿಷಾರ್ಧದಲ್ಲಿ ತೆಗೆಯುತ್ತಿದ್ದರೆಂಬುದು ಅವರ ಅಭಿಪ್ರಾಯ.

ಅಬ್ದುಲ್ ಗಫೂರ್ ನೂರಾನಿಯವರನ್ನು ಎನ್. ರಾಮ್ ನೆನಪಿಸಿಕೊಳ್ಳುವುದು ಹೀಗೆ:
“ಪತ್ರಕರ್ತರ ಪತ್ರಕರ್ತರೂ ಬಹುಮುಖ ಪ್ರತಿಭೆ, ಧೈರ್ಯ ಮತ್ತು ನಿಷ್ಠುರತೆಯ ಪ್ರತೀಕವಾಗಿದ್ದರು ನೂರಾನಿ. ಅವರು ನಾಗರಿಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಪರವಾಗಿ ನಿಂತರು. ನಾನು ಫ್ರಂಟ್‌ಲೈನ್‌ನಲ್ಲಿ ಸಂಪಾದಕನಾದಾಗ ನಿರಂತರವಾಗಿ ಅಂಕಣ ಬರೆಯುತ್ತಿದ್ದರು. ಅಂಕಣ ಎಂದಿಗೂ ತಡವಾಗಿರಲಿಲ್ಲ. ಯಾವುದಾದರೂ ಒಂದು ವಿಷಯದಲ್ಲಿ ನಿಲುವನ್ನು ಸ್ಪಷ್ಟ ಪಡಿಸಲು ಸಾಧ್ಯವಾಗದಿದ್ದರೆ ಅದನ್ನು ವೈಯಕ್ತಿಕ ವೈಫಲ್ಯವೆಂದು ಪರಿಗಣಿಸಿದರು.”

ಜಮ್ಮು-ಕಾಶ್ಮೀರ ವಿಷಯವು ನೂರಾನಿಯ ಗಮನವನ್ನು ಸೆಳೆದ ಒಂದು ವಿಷಯವಾಗಿತ್ತು. ಕೇಂದ್ರವನ್ನು ಆಳಿದ ಸರಕಾರಗಳು ಕಾಶ್ಮೀರಿಗಳೊಂದಿಗೆ ನ್ಯಾಯ ಪಾಲಿಸಲಿಲ್ಲವೆಂದು ಬಹಿರಂಗವಾಗಿ ಹೇಳಲು ಅವರು ಹೆದರಲಿಲ್ಲ. ಕಾಶ್ಮೀರದ ಕುರಿತು ಅವರ ಲೇಖನಗಳು ಓದುಗರನ್ನು ಇತಿಹಾಸದತ್ತ ಕೈ ಹಿಡಿದು ಸಾಗಿಸುತ್ತಿತ್ತು. ತನ್ನ ವಾದಗಳನ್ನು ಸಮರ್ಥಿಸಲು ಪೂರಕ ಪುರಾವೆಗಳನ್ನು ಒದಗಿಸುತ್ತಿದ್ದರು. ‘ದ ಕಾಶ್ಮೀರ್ ಡಿಸ್ಪ್ಯೂಟ್ 1947-2012’ ಎರಡು ಸಂಪುಟಗಳ ಸಂಕಲನವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಅವರು ಭಾರತದ ವಿಭಜನೆಯನ್ನು ಮಾನವ ಇತಿಹಾಸದ ಹತ್ತು ದೊಡ್ಡ ದುರಂತಗಳಲ್ಲಿ ಒಂದು ಎಂದು ಹೇಳುತ್ತಿದ್ದರು. ವಿಭಜನೆಗೆ ಕಾರಣವಾದ ಅಂಶಗಳು ಮತ್ತು ಅದು ಹೇಗೆ ಕಾರ್ಯರೂಪಕ್ಕೆ ಬಂದಿತು ಎಂಬುದರ ಬಗ್ಗೆ ನೂರಾನಿಯವರಷ್ಟು ತಿಳಿದಿರುವ ವ್ಯಕ್ತಿಗಳು ಅಪರೂಪ. ಜಮ್ಮು-ಕಾಶ್ಮೀರ, ಭಾರತ-ಪಾಕಿಸ್ತಾನ ಸಮಸ್ಯೆಗಳಲ್ಲಿ ಅವರ ನಿಲುವು ಪ್ರಶಂಸಿಸಲ್ಪಟ್ಟಿದೆ.

ತನ್ನ ಹದಿನೇಳನೇ ವಯಸ್ಸಿನಲ್ಲಿ ನಡೆದ ಭಾರತ ವಿಭಜನೆಯ ಕುರಿತು ಹೇಳುವಾಗ ಕಾಂಗ್ರೆಸ್, ಹಿಂದೂ ಮಹಾಸಭಾ ಹಾಗೂ ಮುಸ್ಲಿಮ್ ಲೀಗನ್ನು ಅವರು ವಿಮರ್ಶಿಸುತ್ತಾರೆ. ಭಾರತದಲ್ಲಿ ಮುಸ್ಲಿಮರ ಹಿಂದುಳಿಯುವಿಕೆಗೆ ಕೆಲವು ನಾಯಕರ ನಿಲುವುಗಳೇ ಕಾರಣ ಎಂದೂ ನೂರಾನಿಯವರು ಬಹಿರಂಗವಾಗಿಯೇ ಹೇಳಿರುವರು.

2018ರಲ್ಲಿ ಡಾ. ಅಸ್ಗರ್ ಅಲಿ ಇಂಜಿನಿಯರ್ ಸ್ಮಾರಕ ಉಪನ್ಯಾಸ ನಿರ್ವಹಿಸಿ, ಅವರು ಮಾಡಿರುವ ಭಾಷಣವು ಗಮನಾರ್ಹವಾಗಿದೆ. ‘1857 ಮತ್ತು 1947ರ ಪರಿಸ್ಥಿತಿಗಿಂತ ಇಂದು ಮುಸ್ಲಿಮರ ಸ್ಥಿತಿಯು ಕೆಟ್ಟದಾಗಿದೆ. 1952ರಲ್ಲಿ ಚುನಾವಣಾ ಸಭೆಗಳಲ್ಲಿ ನಾನು ಭಾಗವಹಿಸುತ್ತಿದ್ದೆ. ನೆಹರೂರ ಕೈಗಳನ್ನು ಬಲಪಡಿಸಬೇಕು ಎಂಬುದು ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ಅಂದಿನ ಘೋಷಣೆ. ಕಾಂಗ್ರೆಸ್‌ನ ಹಿಂದುತ್ವವಾದಿಗಳ ಮುಂದೆ ನೆಹರೂ ಒಂಟಿಯಾದ ಕಾಲವಾಗಿತ್ತದು. ಪಟೇಲ್ ಮತ್ತು ರಾಜೇಂದ್ರ ಪ್ರಸಾದ್ ನೆಹರೂರ ವಿರುದ್ಧವಾಗಿದ್ದರು. ಗೋವಿಂದ್ ವಲ್ಲಭ್ ಪಂತ್ ಸೇರಿದಂತೆ ಮುಖ್ಯಮಂತ್ರಿಗಳು ಮುಸ್ಲಿಮರೊಂದಿಗೆ ದ್ವೇಷದಿಂದ ವರ್ತಿಸುತ್ತಿದ್ದ ಕಾಲವದು. ಗೋವಿಂದ್ ವಲ್ಲಭ್ ಪಂಥ್ ಬಾಬರಿ ದುರಂತದ ಪಿತಾಮಹ. ನನಗೆ ಉತ್ತರ ಪ್ರದೇಶಕ್ಕೆ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ನಾನು ಓರ್ವ ಅಪರಿಚಿತನಾಗಿ ಮಾರ್ಪಟ್ಟಿದ್ದೇನೆ ಎಂದು ನೆಹರೂ ವಲ್ಲಭ್ ಪಂಥ್‌ಗೆ ಬರೆದರು. ಇಂದು ಸಂಸತ್ತಿನಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಕಡಿಮೆಯಾಗುತ್ತಿದೆ. ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ‘ಸಾವಿರ ವರ್ಷದ ಗುಲಾಮತನದ ಕುರಿತು ಹೇಳಿದರೇ ಹೊರತು 200 ವರ್ಷ ಭಾರತವನ್ನು ಲೂಟಿ ಮಾಡಿದ, ದೇಶದ ಜನರನ್ನು ಗುಲಾಮರಾಗಿಸಿದ ಬ್ರಿಟಿಷರ ಕುರಿತು ಒಂದಕ್ಷಣ ಹೇಳುವುದಿಲ್ಲ…’

ಜಮ್ಮು-ಕಾಶ್ಮೀರದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಶೇಖ್ ಅಬ್ದುಲ್ಲಾರನ್ನು 11 ವರ್ಷ ಜೈಲಿನಲ್ಲಿರಿಸಿದ ಕಾಂಗ್ರೆಸ್ ನೇತೃತ್ವದ ಕ್ರಮವನ್ನು ಅವರು ತೀವ್ರವಾಗಿ ವಿಮರ್ಶಿಸಿದರು. 2019ರಲ್ಲಿ 370ನೇ ವಿಧಿಯ ರದ್ಧತಿಯನ್ನು ಸಂವಿಧಾನ ವಿರೋಧವೆಂದು ವಿಶ್ಲೇಷಿಸಿದರು. ಈ ಕುರಿತು ಹಲವಾರು ಲೇಖನಗಳನ್ನು ಬರೆದರು.

ಸಂವಿಧಾನ ಹಾಗೂ ಕಾಶ್ಮೀರದಂತೆ ನೂರಾನಿಯವರ ಇನ್ನೊಂದು ವಿಷಯ ಹಿಂದುತ್ವ ರಾಜಕೀಯ, ಹಿಂದೂ ಮಹಾಸಭಾ. ಸಾವರ್ಕರ್, ಆರೆಸ್ಸೆಸ್ ಅವರ ಬರಹಗಳಲ್ಲಿ ತೀವ್ರವಾಗಿ ವಿಮರ್ಶಿಸಲ್ಪಟ್ಟಿತು. ಸಾವರ್ಕರ್ ಮತ್ತು ಹಿಂದುತ್ವ, ಖಿhe ಉoಜse ಛಿoಟಿಟಿeಛಿಣioಟಿ (2002, ಖಿhe ಖSS ಚಿಟಿಜ ಣhe ಃಎP, ಂ ಆivisioಟಿ oಜಿ ಐಚಿbouಡಿ (2003) ಮೊದಲಾದ ಗ್ರಂಥಗಳು ಇವರಿಂದ ರೂಪುಗೊಂಡಿತು. ಇತಿಹಾಸ ಸತ್ಯಗಳನ್ನು ಉದ್ಧರಿಸಿದ ಅವರ ವಾದಗಳು ಸಂಘಪರಿವಾರಕ್ಕೆ ತಲೆನೋವಾಗಿತ್ತು.

ಸಮಾನ ಸಿವಿಲ್ ಕೋಡ್‌ನ ವಿರುದ್ಧ ಧ್ವನಿಯೆತ್ತಿದ ವ್ಯಕ್ತಿಯಾಗಿದ್ದರು ನೂರಾನಿ. ಮೂಲಭತ ಹಕ್ಕುಗಳಂತೆ ಮಾರ್ಗ ನಿರ್ದೇಶನಗಳನ್ನು ನಿರ್ಬಂಧಿಸಿ ಜಾರಿಗೊಳಿಸುವ ಹಕ್ಕು ಯಾವುದೇ ನ್ಯಾಯಾಲಯಕ್ಕೂ ಇಲ್ಲವೆಂದೂ ಸಮಾನ ಸಿವಿಲ್ ಕೋಡ್‌ನ ವಿಷಯದಲ್ಲಿ ಸುಪ್ರೀಮ್ ಕೋರ್ಟ್‌ನ ಹಸ್ತಕ್ಷೇಪವು ಸಂಶಯಾಸ್ಪದವಾಗಿದೆ ಎಂದೂ ಅವರು ಬಹಿರಂಗವಾಗಿ ಹೇಳಿದರು.

ಮುಸ್ಲಿಮ್ ಪುರುಷರನ್ನು ಮಾತ್ರ ಶಿಕ್ಷಿಸುವ ಉದ್ದೇಶದಿಂದ ತ್ರಿವಳಿ ತಲಾಕ್ ನಿಯಮವನ್ನು ಜಾರಿಗೆ ತಂದ ಕೇಂದ್ರ ಸರಕಾರದ ಉದ್ದೇಶವನ್ನು ಪ್ರಶ್ನಿಸಿದ ಅವರು, ಈ ವಿಷಯದಲ್ಲಿ ಮೌಲಾನಾ ಮೌದೂದಿಯವರು 1943ರಲ್ಲಿ ಬರೆದ ಲೇಖನವನ್ನು ಉಲ್ಲೇಖಿಸಿದ್ದರು, “ತ್ರಿವಳಿ ತಲಾಕ್ ಧರ್ಮ ವಿರುದ್ಧವೂ ಪಾಪವೂ ಹೌದು. ವಿಚ್ಛೇದನ ಪಡೆಯಲು ಪುರುಷನಿಗೆ ಮೊದಲ ತಲಾಕ್ ಸಾಕಾದರೂ ಸಂಗಾತಿಯನ್ನು ಮೂರು ತಿಂಗಳ ಒಳಗೆ ಹಿಂದಕ್ಕೆ ಕರೆಸಿಕೊಳ್ಳುವ ಅವಕಾಶವನ್ನು ಇಸ್ಲಾಮ್ ನೀಡುತ್ತದೆ. ಇದು ಸರಿಯಾಗಿ ಜಾರಿಗೆ ಬಂದಿದ್ದರೆ ಎಷ್ಟೋ ಕುಟುಂಬಗಳು ರಕ್ಷಿಸಲ್ಪಡುತ್ತಿತ್ತು. ಈ ವಿಷಯದಲ್ಲಿ 1961ರಲ್ಲಿ ಪಾಕಿಸ್ತಾನದಲ್ಲಿ ಜಾರಿಗೆ ತಂದ ಮುಸ್ಲಿಮ್ ಕೌಟುಂಬಿಕ ಕಾನೂನು ಭಾರತದ ಮುಸ್ಲಿಮರಿಗೆ ಸ್ವೀಕರಿಸಲು ಸೂಕ್ತವಾದುದೆಂದು ನೂರಾನಿ ಹೇಳುತ್ತಾರೆ.

ಆರ್ಬಿಟ್ರೇಶನ್ ಕೌನ್ಸಿಲ್ ಚೇರ್‌ಮೆನ್ (ಮಧ್ಯಸ್ಥಿಕೆ ಮಂಡಳಿಯ ಅಧ್ಯಕ್ಷರು)ರಿಗೆ ಲಿಖಿತವಾಗಿ ತಲಾಖ್ ಪತ್ರವನ್ನು ಸಮರ್ಪಿಸಬೇಕು. ನಂತರ ಕೌನ್ಸಿಲ್ ದಂಪತಿಗಳನ್ನು 90 ದಿನಗಳಲ್ಲಿ ಸಮನ್ವಯಗೊಳಿಸಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಮಹಿಳೆಯರಿಗೆ ಖುಲಾ ಮಾನ್ಯವಾಗಿರುವಾಗಲೇ ನಿಕಾಹ್ ನಾಮಾದಲ್ಲಿ ಅದನ್ನು ದಾಖಲಿಸುವ ಹಕ್ಕನ್ನು ಈ ಸುಗ್ರೀವಾಜ್ಞೆಯು ನೀಡುತ್ತದೆ. ಮೂಲ ಶರೀಅತ್ ಅನ್ನು ಬ್ರಿಟಿಷರು ವಿರೂಪಗೊಳಿಸಿದ್ದಾರೆಂದೂ ವೈಯಕ್ತಿಕ ಕಾನೂನನ್ನು ಶರೀಅತ್‌ಗೆ ಅನುಗುಣವಾಗಿ ಪರಿಷ್ಕರಿಸಬೇಕೆಂದೂ ನೂರಾನಿ ಹೇಳಿದ್ದರು.

ತುರ್ತು ಪರಿಸ್ಥಿತಿಯನ್ನು ವಿಮರ್ಶಿಸುವಾಗ ಇಂದಿರಾ ಗಾಂಧಿಯವರ ಕಾರ್ಯವೈಖರಿಯನ್ನು ಹಿಟ್ಲರ್‌ಗೆ ಹೋಲಿಸಿದಂತೆ, ಝಿಯೋನಿಸಂ ಅನ್ನು ಹಾಡಿ ಹೊಗಳುವ ಮೋದಿಯವರನ್ನು ಅವರು ಸುಮ್ಮನೆ ಬಿಡಲಿಲ್ಲ. ಹಿಂದುತ್ವ ಮತ್ತು ಝಿಯೋನಿಸಂ ಒಂದೇ ನಾಣ್ಯದ ಎರಡು ಮುಖಗಳೆಂದು ಅವರು ಬಹಿರಂಗವಾಗಿ ಹೇಳಿದ್ದಾರೆ.

ಝಿಯೋನಿಸಂನ ಸ್ಥಾಪಕ ತಿಯೋ ಡೋರ್ ಹೆರ್ಸಲ್‌ರನ್ನು ಹೊಗಳಿದ ಪ್ರಧಾನಿ ಮೋದಿಯವರ ಪ್ರಸ್ತಾಪವನ್ನು ವಿಮರ್ಶಿಸಿ ಫ್ರಂಟ್‌ಲೈನ್‌ನ ತನ್ನ ಅಂಕಣದಲ್ಲಿ ಬರೆಯುತ್ತಾರೆ, (ಒoಜi & Zioಟಿism, 2017 ಎuಟಥಿ 17) ಯಹೂದಿತ್ವವು ಒಂದು ಪುರಾತನ ಧರ್ಮ. ಆದರೆ ಝಿಯೋನಿಸಂ ಹೆರ್ಸಲ್ 1896ರಲ್ಲಿ ಅರ್ಪಿಸಿದ ವಿಷಲಿಪ್ತವಾದ ಒಂದು ಆದರ್ಶ. ಹಿಂದೂ ಧರ್ಮವು ಪುರಾತನ ಧರ್ಮವಾಗಿದೆ. ಹಿಂದುತ್ವವು 1923ರಲ್ಲಿ ವಿ.ಡಿ. ಸಾವರ್ಕರ್ ಈ ವಿಷಪೂರಿತ ರಾಜಕೀಯದ
ಆದರ್ಶವಾಗಿದ್ದಾರೆ. ಧರ್ಮನಿಷ್ಠ ಹಿಂದೂಗಳು ಹಿಂದುತ್ವವನ್ನು ದ್ವೇಷಿಸುವಂತೆಯೇ ಧರ್ಮನಿಷ್ಠ ಯಹೂದಿಗಳು ಝಿಯೋನಿಸಂ ಅನ್ನು ದ್ವೇಷಿಸುತ್ತಾರೆ.

ನೋಟು ರದ್ಧತಿ ಸೇರಿದಂತೆ ಮೋದಿಯವರ ಹಲವು ಕ್ರಮಗಳನ್ನು ತೀವ್ರವಾಗಿ ಟೀಕಿಸಿದ್ದ ನೂರಾನಿ ಹೊಸ ಸಂಸತ್ ಭವನವನ್ನು ಒಳಗೊಂಡಿರುವ ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಪ್ರಧಾನಿಯನ್ನು ತುಘಲಕ್ ಎಂದು ಕರೆಯುವ ಧೈರ್ಯವನ್ನೂ ತೋರಿದ್ದರು. ಇತಿಹಾಸ, ರಾಜಕೀಯ, ಸಂವಿಧಾನದ ಕೋನಗಳಿಂದ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಮೌಲ್ಯಮಾಪನ ಮಾಡಬೇಕೆಂದು ಹೇಳಿದ ನೂರಾನಿ ಇಂತಹ ಯೋಜನೆಗಳು ಮತ್ತು ಕೋಟ್ಯಂತರ ತೆರಿಗೆ ಹಣವನ್ನು ಪೋಲು ಮಾಡಿ ನಿರ್ಮಿಸುವ ಪ್ರತಿಮೆಗಳಿಂದ ದೇಶಕ್ಕೆ ಏನು ಲಾಭವಿದೆಯೆಂದೂ ಪ್ರಶ್ನಿಸಿದ್ದರು.

ಭಾರತದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಆಡಳಿತ ಪಕ್ಷದ ಸಾಧನವಾಗಿ ಕೆಲಸ ಮಾಡುವ ಪರಿಸ್ಥಿತಿಯಿದೆ. ಇದರ ದುರಂತ ಫಲವನ್ನು ಹೆಚ್ಚಾಗಿ ಸುಳ್ಳಾರೋಪಗಳನ್ನು ಹೊರಿಸಿ ದೀರ್ಘಕಾಲದಿಂದ ಸೆರೆಮನೆಗಳಲ್ಲಿ ಕಳೆಯುತ್ತಿರುವ ಮುಸ್ಲಿಮರು ಅನುಭವಿಸುತ್ತಿದ್ದಾರೆ ಎಂದು 2021 ನವೆಂಬರ್‌ನ ಫ್ರಂಟ್‌ಲೈನ್‌ನ ತನ್ನ ಅಂಕಣದಲ್ಲಿ ನೂರಾನಿ ಬೊಟ್ಟು ಮಾಡಿದ್ದರು.

1962ರಲ್ಲಿ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಭಾಗವಾಗಿ ನೂರಾನಿಯನ್ನು ನಾಲ್ಕು ತಿಂಗಳ ಕಾಲ ಯರವಾಡ ಜೈಲಿನಲ್ಲಿರಿಸಲಾಗಿತ್ತು. ಅವಿವಾಹಿತರಾಗಿದ್ದ ಅವರು ಮುಂಬೈನ ನಾಪಿಯನ್ ಸಿ ರಸ್ತೆಯ ಫ್ಲ್ಯಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅದೇ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ತನ್ನ ತಾಯಿಯನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸುವುದು ಅವರ ದಿನಚರಿಯಲ್ಲಿ ಸೇರಿತ್ತು. ಅವರ ಜೀವನ ಶಿಸ್ತುಬದ್ಧವಾಗಿತ್ತು. ಆರಾಧನಾ ಕರ್ಮಗಳಲ್ಲಿ ನಿಷ್ಠೆ ಪಾಲಿಸುತ್ತಿದ್ದ ಅವರ ಪ್ರಾರ್ಥನಾ ಸಮಯದಲ್ಲಿ ಸಂದರ್ಶಕರಿಗೆ ಅವರನ್ನು ಭೇಟಿಯಾಗುವ ಅನುಮತಿಯಿರಲಿಲ್ಲ.