ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಬಹುದು; ಹೈಕೋರ್ಟ್

0
111

ಸನ್ಮಾರ್ಗ ವಾರ್ತೆ

ಮುಂಬಯಿ: ಮುಸ್ಲಿಂ ವೈಯಕ್ತಿಕ ಕಾನೂನುಗಳು ಒಂದಕ್ಕಿಂತ ಹೆಚ್ಚು ವಿವಾಹವನ್ನು ಅನುಮತಿಸುವುದರಿಂದ, ಮುಸ್ಲಿಂ ಸಮುದಾಯದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ವಿವಾಹವನ್ನು ನೋಂದಾಯಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ, ತನ್ನ ಮೂರನೇ ವಿವಾಹದ ನೋಂದಣಿಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

“ಕಳೆದ ವರ್ಷ ಫೆಬ್ರವರಿಯಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬರು ಅಲ್ಲೀರಿಯಾದ ಮಹಿಳೆಯೊಂದಿಗೆ ತನ್ನ ಮೂರನೇ ವಿವಾಹವನ್ನು ನೋಂದಾಯಿಸಲು ಅರ್ಜಿ ಸಲ್ಲಿಸಿದ್ದು, ಇದು ವ್ಯಕ್ತಿಯ ಮೂರನೇ ವಿವಾಹ ಎಂದು ಅವರ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದರು ಎಂದು ದಂಪತಿಗಳು ಆರೋಪಿಸಿದ್ದರು.

ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಬಾವಾಲ್ಲಾ ಮತ್ತು ಸೋಮಶೇಖರ್ ಸುಂದರೇಶನ್ ಅವರ ವಿಭಾಗೀಯ ಪೀಠವು ಅಕ್ಟೋಬರ್ 15 ರಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಉಪ ವಿವಾಹ ನೋಂದಣಿ ಕಚೇರಿಗೆ, ಆ ವ್ಯಕ್ತಿಯ ವಿವಾಹ ನೋಂದಣಿಯ ಅರ್ಜಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲು ನಿರ್ದೇಶನ ನೀಡಿತು.